ಬೆಂಗಳೂರು: ಚಿನ್ನ ಖರೀದಿ ಮಾಡಬೇಕೆಂದುಕೊಂಡಿದ್ದರೆ ಸದ್ಯಕ್ಕೆ ಸದ್ಯಕ್ಕಂತೂ ಚಿನ್ನ ಖರೀದಿಸುವಂತೆಯೇ ಇಲ್ಲ. ನಿನ್ನೆಯೇ ವಿಪರೀತ ಏರಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೂ ಏರಿಕೆಯತ್ತ ಸಾಗಿದೆ. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಇಂದಂತೂ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿತ್ತು. ಹಬ್ಬದ ಸಂದರ್ಭದಲ್ಲಿ ಚಿನ್ನದ ಬೆಲೆ ಗಗನಕ್ಕೇರಿತ್ತು. ಆದರೆ ಅದಾದ ಬಳಿಕ ಕೊಂಚ ಇಳಿಕೆಯಾಗಿತ್ತು. ಇಂದಂತೂ ಹಿಂದೆಂದೂ ಕಾಣದಷ್ಟು ದುಬಾರಿಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 97, 820 ರೂ.ಗಳಷ್ಟಾಗಿತ್ತು. ಇಂದು ಇನ್ನೂ ಹೆಚ್ಚಾಗಿದ್ದು 97, 995 ರೂ. ಗಳಷ್ಟಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 25 ರೂ. ಏರಿಕೆಯಾಗಿ 8,945 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 27 ರೂ. ಏರಿಕೆಯಾಗಿದ್ದು ಇಂದು 9,758 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಗ್ರಾಂಗೆ 21 ರೂ. ಗಳ್ಟು ಏರಿಕೆಯಾಗಿದ್ದು 7,319 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು. ನಿನ್ನೆ ಬೆಳ್ಳಿ ಬೆಲೆ ಲಕ್ಷದ ಗಡಿ ತಲುಪಿದೆ. ಆದರೆ ಇಂದು 100 ರೂ.ಗಳಷ್ಟು ಇಳಿಕೆಯಾಗಿದ್ದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ ಇಂದು 99,900 ರೂ.ಗೆ ಬಂದು ನಿಂತಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.