ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ 1ರೂ. ಏರಿಕೆ ಕಂಡುಬಂದಿದ್ದು, 1 ಗ್ರಾಂ ಚಿನ್ನದ ಬೆಲೆ 4,628ರೂ.ಗಳಾಗಿದೆ. ಬೆಳ್ಳಿಯ ಬೆಲೆಯಲ್ಲಿ 1ಪೈಸೆ ಏರಿಕೆ ಕಂಡುಬಂದಿದ್ದು, 1 ಗ್ರಾಂ ಬೆಳ್ಳಿಯ ಬೆಲೆ 48.37ರೂ ಆಗಿದೆ.
ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 46,120ರೂ. ಹಾಗೂ 1 ಕೆಜಿ ಬೆಳ್ಳಿ ದರ 48,370ರೂ. ಆಗಿದೆ. ,ಹಾಗೇ ಮುಂಬೈ ನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 46,280ರೂ ಹಾಗೂ 1 ಕೆಜಿ ಬೆಳ್ಳಿ ದರ 48,370ರೂ. ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 44,520ರೂ. ಹಾಗೂ 1 ಕೆಜಿ ಬೆಳ್ಳಿ ದರ 48,370ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ 10ಗ್ರಾಂ ಚಿನ್ನದ ಬೆಲೆ 46,120ರೂ. ಹಾಗೂ 1 ಕೆಜಿ ಬೆಳ್ಳಿ ದರ 48,370ರೂ.ಆಗಿದೆ.