ಗಗನಕ್ಕೇರಿದ ಬಂಗಾರದ ಬೆಲೆ

ಮಂಗಳವಾರ, 5 ಸೆಪ್ಟಂಬರ್ 2017 (09:52 IST)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ. ಸೋಮವಾರ ಚಿನಿವಾರಪೇಟೆಯಲ್ಲಿ ಪ್ರತೀ 10 ಗ್ರಾಂ ಬಂಗಾರದ ಬೆಲೆ 30,600 ರೂ. ದಾಖಲಾಗಿದೆ. ಶುಕ್ರವಾರದ ವಹಿವಾಟಿನಲ್ಲಿ  29,755 ರೂ. ಇದ್ದ 10 ಗ್ರಾಂ ಬಂಗಾರದ ಬೆಲೆ ದಿಢೀರ್ ಏರಿಕೆ ಕಂಡಿದೆ. ವರ್ಷಾರಂಭದಲ್ಲಿ 28,000 ರೂ. ನಷ್ಟಿದ್ದ 10 ಗ್ರಾಂ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಇತ್ತ, ಬೆಳ್ಳಿ ಬೆಲೆಯಲ್ಲೂ 200 ರೂ. ಏರಿಕೆ ಕಂಡಿದದ್ದು, ಕೆ.ಜಿ ಬಂಗಾರಕ್ಕೆ 41,700 ರೂ. ಬೆಲೆ ದಾಖಲಾಗಿದೆ. ಆಮದು ಸುಂಕ ಮತ್ತು ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದ ೇರಿಳಿತವೂ ಬಂಗಾರದ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಏರ್ಪಟ್ಟಿರುವ ಪ್ರಕ್ಷುಬ್ಧ ವಾತಾವರಣದಿಂದಾಗಿ ಡಾಲರ್ ಬೇಡಿಕೆ ಏರಿಳಿತದಿಂದಾಗಿಯೂ ಬಂಗಾರದ ದರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಭಾರತಕ್ಕೆ ಬೇಡಿಕೆಗೆ ತಕ್ಕಂತೆ ಬಂಗಾರದ ಆಮದು ಮಾತ್ರ ನಡೆಯುತ್ತಲೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ