ಬಂಗಾರದ ಬೆಲೆ ಮತ್ತಷ್ಟು ಕಡಿಮೆಯಾಗಿದೆ. ಶನಿವಾರ ಚಿನ್ನದ ಬೆಲೆ ರೂ.130 ರಷ್ಟು ಇಳಿಕೆಯಾಗಿದ್ದು, 10 ತಿಂಗಳ ಕನಿಷ್ಟ ಬೆಲೆ ದಾಖಲಾಗಿದೆ. ಇದರಿಂದ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 28,450ಕ್ಕೆ ಇಳಿದಿದೆ. ಅಂತಾರಾಷ್ಟ್ರೀಯವಾಗಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶೀಯ ಮಾರುಕಟ್ಟೆಯ ಚಿನ್ನದ ವ್ಯಾಪಾರಿಗಳಿಂದ ಬೇಡಿಕೆ ಇಲ್ಲದ ಕಾರಣ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.
ಇನ್ನು ಬೆಳ್ಳಿ ಬೆಲೆ ಕೂಡ ರೂ.600ಕ್ಕೆ ಇಳಿದು ಕೆ.ಜಿಗೆ ರೂ.41,250 ದಾಖಲಾಗಿದೆ. ಉದ್ಯಮ ಘಟಗಳು, ನಾಣ್ಯ ತಯಾರಿಕೆದಾರರಿಂದ ಬೇಡಿಕೆ ಕುಸಿದ ಕಾರಣ ಬೆಳ್ಳಿ ಬೆಲೆ ಪತನವಾಗಿದೆ. ಅಂತಾರಾಷ್ಟ್ರೀಯವಾಗಿ ಬಂಗಾರ ಒಂದು ಔನ್ಸ್‌ಗೆ ಶೇ.0.92ರಷ್ಟು ಇಳಿಕೆಯಾಗಿ, 1,159.60 ಡಾಲರ್‌ಗಳಷ್ಟಿದೆ.
ರಾಜಧಾನಿ ದೆಹಲಿಯಲ್ಲಿ ಶೇ.99.9, ಶೇ.99.5 ಶುದ್ಧ ಬಂಗಾರ ಬೆಲೆ ತಲಾ ರೂ.130ರಷ್ಟು ಇಳಿಕೆಯಾಗಿದ್ದು, ಕ್ರಮವಾಗಿ ರೂ. 28,450, ರೂ.28,300 ದಾಖಲಾಗಿದೆ. ಶುಕ್ರವಾರ ಸಹ ಹಳದಿ ಲೋಹದ ಬೆಲೆ ರೂ.130 ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಹೊಡೆತ, ಕಪ್ಪುಹಣ ಮಟ್ಟಹಾಕಲು ಸರಕಾರ ಅಧಿಕ ಬೆಲೆಯ ನೋಟು ರದ್ದು ಮಾಡಿದ್ದು, ಬಂಗಾರದ ಕೊಂಡುಕೊಳ್ಳಲು ನಿಯಮಗಳನ್ನು ರೂಪಿಸಿದ್ದು ಕುಸಿತಕ್ಕೆ ಕಾರಣವಾಗಿದೆ.