ಹನ್ನೊಂದು ತಿಂಗಳ ಕನಿಷ್ಠ ಸ್ಥಾನಕ್ಕೆ ಬಂಗಾರ ಬೆಲೆ

ಮಂಗಳವಾರ, 27 ಡಿಸೆಂಬರ್ 2016 (08:23 IST)
ಬಂಗಾರ ಬೆಲೆ ಮತ್ತಷ್ಟು ಕಡಿಮೆಯಾಗಿದೆ. ಸೋಮವಾರದ ವಹಿವಾಟಿನಲ್ಲಿ ರೂ.250ರಷ್ಟು ಕಡಿಮೆಯಾಗುವ ಮೂಲಕ 11 ತಿಂಗಳ ಕನಿಷ್ಥ ಸ್ಥಾನಕ್ಕೆ ಇಳಿದಿದೆ. 10 ಗ್ರಾಂಗಳ ಸ್ವಚ್ಛವಾದ ಚಿನ್ನ ರೂ.27,550 ಬೆಲೆಗೆ ಬಿಕರಿಯಾಗಿದೆ. 
 
ಆಭರಣ ತಯಾರಿಕೆದಾರರಿಂದ, ವ್ಯಾಪಾರಸ್ಥರಿಂದ ಖರೀದಿ ಕಡಿಮೆಯಾಗಿರುವುದು, ಭವಿಷ್ಯ ವಹಿವಾಟಿನಲ್ಲಿ ಕಡಿಮೆ ದರ ನಿಗದಿಯಾಗಿವುದು ಹಳದಿ ಲೋಹದ ಬೆಲೆ ಇಳಿಕೆಗೆ ಕಾರಣ ಎಂದು ಚಿನಿವಾರಪೇಟೆ ಮೂಲಗಳು ತಿಳಿಸಿವೆ. ಇನ್ನೊಂದು ಕಡೆ ಬೆಳ್ಳಿಯ ಬೆಲೆಯೂ ಕಡಿಮೆಯಾಗಿದೆ. ಒಂದು ಕೆ.ಜಿ ಬೆಳ್ಳಿ ರೂ.210 ಕಡಿಮೆಯಾಗಿ ರೂ.38,600ರಷ್ಟಾಗಿದೆ. 

ಉದ್ಯಮಗಳು, ನಾಣ್ಯ ತಯಾರಕರಿಂದ ಖರೀದಿ ಕಡಿಮೆಯಾಗಿರುವುದು ಬೆಳ್ಳಿ ಬೆಲೆ ಇಳಿತಕ್ಕೆ ಕಾರಣ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ ನಗದು ಕೊರತೆಯಿಂದಲೂ ಬಂಗಾರ, ಬೆಳ್ಳಿ ಬೆಲೆಗಳಲ್ಲಿ ಇಳಿತಕ್ಕೆ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ