ಇಂದು ಆಭರಣ ಖರೀದಿಸುವವರಿಗೆ ಸಿಹಿಸುದ್ದಿ; ಬೆಳ್ಳಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ

ಬುಧವಾರ, 5 ಫೆಬ್ರವರಿ 2020 (06:59 IST)
ನವದೆಹಲಿ : ಇಂದು ಆಭರಣ  ಖರೀದಿಸುವವರಿಗೆ ಸಿಹಿಸುದ್ದಿ. ಚಿನ್ನ ಹಾಗೂ ಬೆಳ್ಳಿ  ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದ್ದು, 1 ಗ್ರಾಂ ಚಿನ್ನಕ್ಕೆ 3960ರೂ ಗಳಾಗಿವೆ.


ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 39,600 ಹಾಗೂ 1 ಕೆಜಿ ಬೆಳ್ಳಿ ದರ 4,850ರೂ. ಆಗಿದೆ. ಹಾಗೇ ಮುಂಬೈ ನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 39,600ರೂ. ಹಾಗೂ 1 ಕೆಜಿ ಬೆಳ್ಳಿ ದರ 4,850ರೂ. ಆಗಿದೆ.


ಬೆಂಗಳೂರಿನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 38.050ರೂ. ಹಾಗೂ 1 ಕೆಜಿ ಬೆಳ್ಳಿ ದರ 4,850ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ  10ಗ್ರಾಂ ಚಿನ್ನದ ಬೆಲೆ 39820ರೂ. ಹಾಗೂ 1 ಕೆಜಿ ಬೆಳ್ಳಿ ದರ 4,850ರೂ. ಆಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ