ಸಿನಿಮಾ ಮತ್ತು ವಿಡಿಯೋ ಡೌನ್ ಲೋಡ್ ಮಾಡುವವರಿಗೆ ವೋಡಾಫೋನ್ ಕಡೆಯಿಂದ ಸಿಹಿಸುದ್ದಿ

ಶುಕ್ರವಾರ, 19 ಏಪ್ರಿಲ್ 2019 (09:40 IST)
ನವದೆಹಲಿ : ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ವೋಡಾಫೋನ್ ಕಂಪನಿ ತನ್ನ ಗ್ರಾಹಕರಿಗಾಗಿ  16 ರೂಪಾಯಿಗೆ ಒಂದು ಜಿಬಿ ಡೇಟಾ ಆಫರ್ ನೀಡುತ್ತಿದೆ.


ಹೌದು. ವೋಡಾಫೋನ್ ‘ಫಿಲ್ಮಿ ರೀಚಾಜ್೯' ಎಂಬ ಪ್ಲಾನ್ ಹೆಸರಿನಲ್ಲಿ ಈ ಆಫರ್ ನೀಡುತ್ತಿದ್ದು, ಈ 1 ಜಿಬಿ ಡೇಟಾ 24 ಗಂಟೆಗಳ ವ್ಯಾಲಿಡಿಟಿಯನ್ನು ಹೊಂದಿದೆ. ಮೈ ವೋಡಾಫೋನ್ ಆಪ್ ನಲ್ಲೂ ಈ ಸೇವೆ ಲಭ್ಯವಿದ್ದು,  ಸಿನಿಮಾ ಮತ್ತು ವಿಡಿಯೋಗಳನ್ನು ಡೌನ್ ಲೋಡ್ ಮಾಡೋ ಗ್ರಾಹಕರಿಗೆ ಇದು ತುಂಬಾ ಉಪಯೋಗಕಾರಿಯಾಗಿದೆ.


ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಗೋವಾ, ಗುಜರಾತ್ ರಾಜ್ಯಗಳಲ್ಲಿ ವೋಡಾಫೋನ್ ಮೊದಲ ಬಾರಿಗೆ ಈ ಪ್ಲಾನ್ ನ್ನು ಪರಿಚಯಿಸುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ