ನವದೆಹಲಿ : ಸ್ಯಾನಿಟರಿ ನ್ಯಾಪ್ ಕಿನ್ಸ್‌ಗಳ ಮೇಲೆ ಜಿ.ಎಸ್.ಟಿ. ವಿಧಿಸಿರುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಸ್ಯಾನಿಟರಿ ನ್ಯಾಪ್ ಕಿನ್ಸ್‌ಗಳನ್ನು ಜಿ.ಎಸ್.ಟಿ. ಯಿಂದ ಹೊರಗಿಡುವುದರ ಮೂಲಕ ಕೇಂದ್ರ ಸರ್ಕಾರ ಮಹಿಳೆಯರಿಗೆ ಸಿಹಿಸುದ್ದಿಯನ್ನು ನೀಡಿದೆ.
ಸ್ಯಾನಿಟಿರಿ ನ್ಯಾಪ್‍ಕಿನ್ ಮೇಲಿನ ಜಿ.ಎಸ್.ಟಿ ಯನ್ನು ತೆಗೆದುಹಾಕುವಂತೆ ಹಲವರು ಆಗ್ರಹಿಸಿದ ಕಾರಣ ಈ ಹಿಂದೆ ವಿಧಿಸಲಾಗಿದ್ದ ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲಿನ ಶೇ.12ರಷ್ಟು ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಇದರೊಂದಿಗೆ ರಾಖಿ, ಪಾಶ್ಚರೀಕರಿಸಿದ ಹಾಲು, ಮಾರ್ಬಲ್ಸ್, ಕಟ್ಟಡ ಕಲ್ಲು & ಮರಮಟ್ಟುಗಳು ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ ನಡೆದ 28ನೇ ಜಿಎಸ್‍ಟಿ ಕೌನ್ಸಿಲ್ ಮಂಡಳಿಯಲ್ಲಿ ನಿರ್ಧಾರ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ