ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣೆ: 7 ಸೇತುವೆ ಮುಳುಗಡೆ

ಶನಿವಾರ, 21 ಜುಲೈ 2018 (18:26 IST)
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ತಗ್ಗಿದ ಮಳೆಯ ಪ್ರಮಾಣ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೆಜ್ ಮತ್ತು ದೂಧಗಂಗಾ ನದಿಯಿಂದ ನೀರು ಹರಿಬಿಡಲಾಗುತ್ತದೆ. ಕೃಷ್ಣಾ ನದಿಗೆ 2 ಲಕ್ಷ 25 ಸಾವಿರ ಕ್ಯೂಸೆಕ ನೀರು ಹರಿವ ಮುನ್ಸೂಚನೆ ಕಂಡು ಬಂದಿದೆ. ಇದರಿಂದಾಗಿ ಬಹಳಷ್ಟು ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.

ಪ್ರವಾಹ ಪರಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಹೇಳಿಕೆ ನೀಡಿದ್ದಾರೆ.  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜಿಲ್ಲೆಯ ತಾಲೂಕಿನಲ್ಲಿ ಬರುವ ಕೃಷ್ಣಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.  ನದಿದಡಗಳಿಗೆ ಡಿಸಿ ಭೇಟಿ ನೀಡಿ ಯಡೂರ ಗ್ರಾಮದಲ್ಲಿ ಹೇಳಿಕೆ ನೀಡಿದ್ದು, ಕೃಷ್ಣಾನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಅದಕ್ಕಾಗಿ ನದಿಯಲ್ಲಿ ಇಳಿಯದಂತೆ ಮನವಿ ಮಾಡಿದರು. ಕೆಲ ಗ್ರಾಮದಲ್ಲಿ ಬೋಟ್ಗಳು ಕೆಟ್ಟು ನಿಂತಿವೆ. ಅದಕ್ಕಾಗಿ ಕಾರವಾರದಿಂದ ಬೋಟ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಹ ಎದುರಿಸಲು ಪ್ರತಿ ಗ್ರಾಮಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಆಯಾ ಗ್ರಾಮಗಳನ್ನು ಬಿಟ್ಟು ಬೇರೆ ಕಡೆಗೆ ಹೋಗದಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಹಿಪ್ಪರಗಿ ಬ್ಯಾರೇಜ್ನ ಹದಿನಾಲ್ಕು ಗೇಟ್ ಗಳ ಮೂಲಕ 2 ಲಕ್ಷ 3 ಸಾವಿರ ಕ್ಯುಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಸದ್ಯಕ್ಕೆ  ಚಿಕ್ಕೋಡಿ ವ್ಯಾಪ್ತಿಯ 7 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಯಡೂರ-ಕಲ್ಲೊಳ, ಕಾರದಗಾ-ಬೋಜ, ಬೋಜವಾಡಿ- ಕನ್ನುರ, ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಸಿ, ಮಲ್ಲಿಕವಾಡ-ದತ್ತವಾಡ, ಕುಡಚಿ-ಉಗಾರ ಸೇತುವೆಗಳು ಮುಳುಗಡೆಯಾಗಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ