ಬರಲಿದೆ ಹೋಂಡಾ ಸೆಲ್ಫ್ ಡ್ರೈವಿಂಗ್ ಕಾರು

ಶನಿವಾರ, 24 ಡಿಸೆಂಬರ್ 2016 (12:19 IST)
ಪ್ರಮುಖ ಆಟೋಮೊಬೈಲ್ ಸಂಸ್ಥೆ ಹೋಂಡಾ ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ತರಲು ಮುಂದಾಗಿದೆ. 2020ರ ವೇಳೆಗೆ ಡ್ರೈವರ್ ರಹಿತ ಕಾರುಗಳನ್ನು ರಸ್ತೆಗೆ ತರುವುದಾಗಿ ಈ ವರ್ಷ ಜೂನ್‍ನಲ್ಲಿ ಕಂಪನಿ ಹೇಳಿತ್ತು. ಅಕ್ಕಾಗಿ ಈಗಾಗಲೆ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.
 
ಇದಕ್ಕಾಗಿ ಸ್ವಂತ ಆಟೋಮೆಟೆಡ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಸದೆ ಮತ್ತೊಂದು ಕಂಪನಿ ಜೊತೆ ಕೈಜೋಡಿಸಲು ನಿರ್ಧರಿಸಿದೆ. ಅದಕ್ಕಾಗಿ ಟೆಕ್ ದಿಗ್ಗಜ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಜೊತೆ ಮಾತುಕತೆ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ.
 
33@ ಅನ್ನುವ ಕಂಪನಿ ಅಭಿವೃದ್ದಿಪಡಿಸಿದ ’ವೆಮೋ’ ಎಂಬ ಸೆಲ್ಫ್ ಡ್ರೈವಿಂಗ್ ವ್ಯವಸ್ಥೆ ಬಹುತೇಕ ಪೂರ್ಣವಾಗಿದೆ. ಈಗಾಗಲೆ ಈ ವ್ಯವಸ್ಥೆ ಮೂಲಕ ಅಮೆರಿಕಾದ ಕೆಲ ನಗರಗಳ ರಸ್ತೆ ಮೇಲೆ ಪರೀಕ್ಷೆಗಳನ್ನೂ ಮಾಡಲಾಗಿದೆ. ವೆಮೋ ಕಂಪನಿಯ ಸಾಫ್ಟ್‌ವೇರ್ ಬಳಸಿಕೊಳ್ಳಲು ಕಂಪನಿ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡತೆ ಆದರೆ 2020ರ ಟೋಕಿಯೊ ಒಲಂಪಿಕ್ಸ್ ವೇಳೆಗೆ ಚಾಲಕ ರಹಿತ ಕಾರು ಸಿದ್ದವಾಗಲಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ