ಭಾರತ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಸಂಬಳ ಎಷ್ಟು ಗೊತ್ತಾ..?

ಶನಿವಾರ, 29 ಏಪ್ರಿಲ್ 2017 (18:08 IST)
44 ವರ್ಷದ ಭಾರತ ಮೂಲದ ಸಿಇಓ ಸುಂದರ್ ಪಿಚೈ ಗೂಗಲ್ ಸಂಸ್ಥೆಯನ್ನ ಯಶಸ್ಸಿನ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಇದಕ್ಕಾಗಿ ಕಳೆದ ವರ್ಷ ಅವರು ಪಡೆದ ಕಾಂಪನ್ಸೇಶನ್ ಎಷ್ಟು ಗೊತ್ತಾ..? ಬರೋಬ್ಬರಿ 200 ಮಿಲಿಯನ್ ಡಾಲರ್(ಸುಮಾರು 128 ಕೋಟಿ) 2015ಕ್ಕಿಂತ ದುಪ್ಪಟ್ಟು ಬೋನಸ್ ಸುಂದರ್ ಪಿಚೈಗೆ ಸಿಕ್ಕಿದೆ.

ಕಳೆದ ವರ್ಷ 650,000 ಡಾಲರ್ ಸಂಬಳ ಪಡೆದಿರುವ ಪಿಚೈ ಅದಕ್ಕಿಂತಲೂ ಹೆಚ್ಚು ಬೋನಸ್ ಪಡೆದಿದ್ದಾರೆ. ಗೂಗಲ್`ನಿಂದ ಟಹಲವು ಯಶಸ್ವಿ ಉತ್ಪನ್ನಗಳನ್ನ ಪರಿಚಯಿಸಿದ್ದಕ್ಕಾಗಿ ಗೂಗಲ್ ಪರಿಹಾರ ಸಮಿತಿ ಪಿಚೈಗೆ ಈ ಭಾರೀ ಉಡುಗೊರೆ ಕೊಟ್ಟಿದೆ.

ಸುಂದರ್ ಪಿಚೈ ನೇತೃತ್ವದಲ್ಲಿ ಜಾಹೀರಾತು ವೃದ್ಧಿ,   
ಯೂಟ್ಯೂಬ್ ಉದ್ಯಮ ವೃದ್ಧಿ, ಗೂಗಲ್ ಸ್ಮಾರ್ಟ್ ಫೋನ್ ಪರಿಚಯ ಹೀಗೆ ಹಲವು ಪ್ರಯೋಗಗಳಲ್ಲಿ ಗೂಗಲ್ ಸಂಸ್ಥೆ ಸಾಕಷ್ಟು ಆದಾಯ ಗಳಿಸಿದೆ. ಹಾರ್ಡ್ವೇರ್ ಮತ್ತು ಕ್ಲೌಡ್ ಸರ್ವಿಸ್ ಸೇರಿ ಗೂಗಲ್ ಸಂಸ್ಥೆ ಆದಾಯ ಕಳೆದ ವರ್ಷಾರ್ಧದಲ್ಲಿ ದಾಖಲೆ 3.1 ಬಿಲಿಯನ್ ಡಾಲರ್`ಗೆ ಹೆಚ್ಚಿದ್ದು, ಶೇ.50ರಷ್ಟು ಏರಿಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ