ಬಳಕೆದಾರರ ಹಿತದೃಷ್ಟಿಯಿಂದ ಪ್ಲೇಸ್ಟೋರ್ ನಿಂದ ನಕಲಿ ಆ್ಯಪ್ ಗಳನ್ನು ಡಿಲೀಟ್ ಮಾಡಿದ ಗೂಗಲ್

ಸೋಮವಾರ, 19 ಆಗಸ್ಟ್ 2019 (09:01 IST)
ನವದೆಹಲಿ : ಬಳಕೆದಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ನಕಲಿ ಆ್ಯಪ್ ಗಳನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆ.




ಭದ್ರತಾ ಸಂಶೋಧನೆ ಹಾಗೂ ತಂತ್ರಜ್ನಾನ ಸಂಸ್ಥೆ ನಕಲಿ​ ಆ್ಯಪ್​ ಗಳ ಕುರಿತಾಗಿ ಪ್ಲೇಸ್ಟೋರ್ ​ಗೆ ಎಚ್ಚರಿಕೆಯನ್ನು ನೀಡಿತ್ತು. ಹೆಚ್ಚಾಗಿ ಫೋಟೋಗ್ರಫಿ ಮತ್ತು ಗೇಮಿಂಗ್​ ಆಯಪ್​​ಗಳಲ್ಲಿ ನಕಲಿ ಆ್ಯಪ್ ಗಳು  ಕಂಡುಬಂದಿದ್ದು, ಇವುಗಳು ಜಾಹೀರಾತುಗಳನ್ನು ನೀಡಿ ಬಳಕೆದಾರರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದನ್ನು ಭದ್ರತಾ ಸಂಸ್ಥೆ ತಿಳಿಸಿತ್ತು.


ಸೂಪರ್ ಸೆಲ್ಫಿ, ಕಾಸ್ ಕ್ಯಾಮೆರಾ, ಪಾಪ್ ಕ್ಯಾಮೆರಾ ಮತ್ತು ಒನ್ ಸ್ಟ್ರೋಕ್ ಲೈನ್ ಪಝಲ್ ಸೇರಿದಂತೆ ಇನ್ನಿತರೆ ಜನಪ್ರಿಯ ಆಪ್ ಗಳು ಈ ರೀತಿ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದವು ಎಂದು ಕಂಪನಿ ಹೇಳಿದೆ. ಈ ಹಿನ್ನೆಲೆಯಲ್ಲಿ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ 85 ಆಪ್ ಗಳನ್ನು ತೆಗೆದುಹಾಕಿದೆ. ಜೊತೆಗೆ ಗ್ರಾಹಕರ ಭದ್ರತೆ ಮತ್ತು ಹಿತ ರಕ್ಷಣೆಗಾಗಿ ಗೂಗಲ್​ ನಿಯಮಿತವಾಗಿ ಪ್ಲೇಸ್ಟೋರ್​ ಆ್ಯಪ್ ​ಗಳ ಪರಿಶೀಲನೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ