ವೀರ ಚಕ್ರ ಪ್ರಶಸ್ತಿಗೆ ಭಾಜನರಾದ ವೀರ ಯೋಧ ಅಭಿನಂದನ್ ವರ್ತಮಾನ್
ಗುರುವಾರ, 15 ಆಗಸ್ಟ್ 2019 (10:44 IST)
ನವದೆಹಲಿ : ಪುಲ್ವಾಮ ದಾಳಿಯ ವೇಳೆ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ವೀರ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
73ನೇ ಸ್ವಾತಂತ್ರ್ಯ ದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೀರ ಯೋಧ ಅಭಿನಂದನ್ ವರ್ತಮಾನ್ ಅವರಿಗೆ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ಗಡಿ ಪ್ರವೇಶಿಸಲು ಮುಂದಾದ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪಾಕ್ ವಶರಾದ ಅಭಿನಂದನ್ ವರ್ತಮಾನ್ ಅವರು ಪಾಕಿಸ್ತಾನದವರು ನೀಡಿದ ಮಾನಸಿಕ ಹಿಂಸೆ ಸಹಿಸಿಕೊಂಡು ಯಾವುದೇ ಮಾಹಿತಿಯನ್ನು ಬಿಟ್ಟುಕೊಡದೆ ಮತ್ತೆ ತಾಯ್ನಾಡಿಗೆ ಮರಳಿದ್ದರು. ಈ ವೀರ ಯೋಧನ ಸಾಹಸವನ್ನು ಇಡೀ ದೇಶವೇ ಮೆಚ್ಚಿ ಕೊಂಡಾಡಿತ್ತು.