ಗೂಗಲ್​ ಮ್ಯಾಪ್ ನಲ್ಲಿ ಎರಡು ಹೊಸ ಫೀಚರ್ ಗಳನ್ನು ಪರಿಚಯಿಸಲಿರುವ ಗೂಗಲ್​ ಸಂಸ್ಥೆ. ಇದರಿಂದಾಗುವ ಪ್ರಯೋಜನವೇನು ಗೊತ್ತಾ?

ಶನಿವಾರ, 1 ಜೂನ್ 2019 (06:47 IST)
ನವದೆಹಲಿ : ಗೂಗಲ್​ ಸಂಸ್ಥೆ ಗೂಗಲ್​ ಮ್ಯಾಪ್ ನಲ್ಲಿ ವಾಹನ ಚಾಲಕರಿಗಾಗಿ ಎರಡು ಹೊಸ ಫೀಚರ್ ಗಳನ್ನು ಪರಿಚಯಿಸಲು ಮುಂದಾಗಿದೆ.




ಈ ಹೊಸ ಫೀಚರ್ ವಾಹನ ಸವಾರರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಇದರಿಂದ ವಾಹನ ಚಲಾಣೆಯ ವೇಗದ ಮಿತಿಯ ಕುರಿತು ಮಾಹಿತಿ ಸಿಗಲಿದೆ. ಯಾವ ರಸ್ತೆಗಳಲ್ಲಿ ವೇಗದ ಮಿತಿ ಎಷ್ಟು ಎಂಬುದನ್ನು ಈ ಫೀಚರ್​ಗಳ ಸಹಾಯದಿಂದ ಗೂಗಲ್​ ಮ್ಯಾಪ್​​ ತೋರಿಸುತ್ತದೆ. ಅಲ್ಲದೇ ಆ ರಸ್ತೆಯಲ್ಲಿ ಇರುವ ಬಂಕ್​ ಗಳ ಇಂಧನ ಬೆಲೆ, ರಸ್ತೆ ಕುರಿತಾದ ಮಾಹಿತಿ, ಅಪಘಾತವಾದರೆ ವರದಿ ಮಾಡುವ ಆಯ್ಕೆಯು ಇರಲಿದೆ.


40 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವೇಗದ ಮಿತಿ ಮತ್ತು ಮೊಬೈಲ್​ ರಾಡರ್​​ ಸ್ಥಳಗಳನ್ನು ಗುರುತಿಸುವಂತಹ ಫೀಚರ್ಸ್​ಗಳ ಕುರಿತು ಗೂಗಲ್​ ಸಂಸ್ಥೆ ದೃಢೀಕರಿಸಿದ್ದು, ಮುಂಬರುವ ದಿನಗಳಲ್ಲಿ ಈ ಫೀಚರ್ಸ್​​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಸಿಗಲಿದೆ. ಅಂತೆಯೇ,​ ಮೊಬೈಲ್​ ಸ್ಪೀಡ್​ ಕ್ಯಾಮೆರಾಗಳು ಕೂಡ ಮ್ಯಾಪ್​ನಲ್ಲಿ ಕಾಣಿಸಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ