ಜಿಎಸ್‌ಟಿ: ಯಾವುದು ತುಟ್ಟಿ, ಯಾವುದು ಅಗ್ಗ...?

ಶುಕ್ರವಾರ, 21 ಅಕ್ಟೋಬರ್ 2016 (10:34 IST)

ನವದೆಹಲಿ: ಮುಂದಿನ ಹಣಕಾಸು ವರ್ಷದಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಬರಲಿದ್ದು, ಜನ ಸಾಮಾನ್ಯರ ಜೇಬಿಗೂ ಕತ್ತರಿ ಬೀಳಲಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
 


 

ಜಿಎಸ್‌ಟಿ ಜಾರಿಯಾದಂದಿನಿಂದ ಖಾದ್ಯ ತೈಲ, ಕೋಳಿ ಮಾಂಸ, ಮಸಾಲೆ ಪದಾರ್ಥಗಳು ದುಬಾರಿಯಾಗಲಿವೆ. ನಾಲ್ಕು ಹಂತದ ಜಿಎಸ್ಟಿ ಜಾರಿಯಲ್ಲಿ ಇದರ ತೆರಿಗೆ ಜಾಸ್ತಿಯಾಗಲಿದ್ದು, ಅನಿವಾರ್ಯವಾಗಿ ಗ್ರಾಹಕರು ಜೇಬನ್ನು ಭಾರ ಮಾಡಿಕೊಳ್ಳಲೇಬೇಕು. ಆದರೆ, ಕಡಿಮೆ ತೆರಿಗೆ ಕಾರಣ ಎಲೆಕ್ಟ್ರಾನಿಕ್ ವಸ್ತುಗಳು ಸಹಜವಾಗಿಯೆ ಅಗ್ಗವಾಗಲಿವೆ. ಟೆಲಿವಿಷನ್, ಏರ್ ಕಂಡಿಷನ್, ರೆಫ್ರಿಜರೇಟರ್, ವಾಷಿಂಗ್ ಮಷಿನ್ ಸೇರಿದಂತೆ ಇನ್ನಿತರ ಗೃಹೋಪಯೋಗಿ ಯಂತ್ರಗಳ ದರ ಕಡಿಮೆಯಾಗಲಿದೆ.

 

ಎಲ್ಲ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಜಿಎಸ್‌ಟಿ ನಡೆಸಿದ ಸಭೆಯಲ್ಲಿ ನಾಲ್ಕು ಹಂತದ ತೆರಿಗೆ ವ್ಯವಸ್ಥೆ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ನಾಲ್ಕು ಹಂತದ ಏಕರೂಪ ತೆರಿಗೆ ವ್ಯವಸ್ಥೆ ಜಾರಿಯಿಂದ ಗ್ರಾಹಕರ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣ ದುಬ್ಬರದ ಮೇಲಾಗುವ ಪರಿಣಾಮದ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂದಿದೆ.

 

ದುಬಾರಿಯಾಗಲಿರುವ ವಸ್ತುಗಳು:

ಕೋಳಿಮಾಂಸ, ಖಾದ್ಯ ತೈಲ, ಕೊಬ್ಬರಿ ಎಣ್ಣೆ, ಕೊತ್ತಂಬರಿ ಬೀಜ, ಕಾಳು ಮೆಣಸು, ಅರಿಸಿನ, ಜೀರಿಗೆ, ಎಣ್ಣೆಕಾಳು, ಗ್ಯಾಸ್ ಸ್ಟೋವ್, ಗ್ಯಾಸ್ ಬರ್ನರ್, ಸೊಳ್ಳೆ ಬತ್ತಿ, ಕೀಟ ನಾಶಕ.

 

ಇಳಿಕೆಯಾಗುವ ವಸ್ತುಗಳು:

ಟಿವಿ, ಏರ್ ಕಂಡಿಷನರ್, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಇನ್ವರ್ಟರ್, ಅಡುಗೆ ಸಲಕರಣೆ, ಸುಗಂಧ ದೃವ್ಯ, ಶೇವಿಂಗ್ ಕ್ರೀಮ್, ಶಾಂಪೂ, ಸ್ನಾನದ ಸಾಬೂನು, ಪೌಡರ್ ಮತ್ತು ಕೇಶ ತೈಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ