ಹೆಸ್ಟರ್ ಬಯೋಸೈನ್ಸ್ ಸಂಸ್ಥೆಗೆ 5.5 ಕೋಟಿ ರೂ, ನಿವ್ವಳ ಆದಾಯ

ಶನಿವಾರ, 7 ಮೇ 2016 (18:02 IST)
ಹೆಸ್ಟರ್ ಬಯೋಸೈನ್ಸ್ ಸಂಸ್ಥೆ, ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯಕ್ಕೆ ಒಟ್ಟು ನಿವ್ವಳ ಲಾಭದಲ್ಲಿ 57.14 ಪ್ರತಿಶತ ಏರಿಕೆಗೊಂಡು 5.5 ಕೋಟಿ ತಲುಪಿದೆ. 
ಹೆಸ್ಟರ್ ಬಯೋಸೈನ್ಸ್ ಸಂಸ್ಥೆ, ಕಳೆದ ಆರ್ಥಿಕ ವರ್ಷದ ಇದೆ ಅವಧಿಯಲ್ಲಿ 3.5 ಕೋಟಿ ರೂಪಾಯಿ ನಿವ್ವಳ ಲಾಭ ಹೊಂದಿತ್ತು ಎಂದು ಸಂಸ್ಥೆ ತಿಳಿಸಿದೆ.
 
ಸ್ಟ್ಯಾಂಡ್ಅಲೋನ್ ಆಧಾರದ ಮೇಲೆ ಕಂಪನಿಯ ಒಟ್ಟು ಮಾರಾಟ 28.18 ಪ್ರತಿಶತ ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 23.36 ಕೋಟಿ ತಲುಪಿತ್ತು. 
 
ಸ್ಟ್ಯಾಂಡ್ಅಲೋನ್ ಆಧಾರದ ಮೇಲೆ 2014-15 ರ ಆರ್ಥಿಯ ವರ್ಷದಲ್ಲಿ ಕಂಪನಿಯ ಒಟ್ಟು ನಿವ್ವಳ ಲಾಭ 13.22 ಕೋಟಿ ಇದ್ದು, 2015-16 ರ ಸಾಲಿನಲ್ಲಿ 19.22 ಕೋಟಿಗೆ ಏರಿಕೆಯಾಗಿದೆ.
 
ಸ್ಟ್ಯಾಂಡ್ಅಲೋನ್ ಆಧಾರದ ಮೇಲೆ ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯ ಒಟ್ಟು ಮಾರಾಟ90.03 ಕೋಟಿ ಇದ್ದು, ಪ್ರಸಕ್ತ ಸಾಲಿನಲ್ಲಿ 100.89 ಕೋಟಿಗೆ ಏರಿಕೆಯಾಗಿದೆ.
 
ಹೆಸ್ಟರ್ ಬಯೋಸೈನ್ಸ್ ಸಂಸ್ಥೆಯ ನಿರ್ದೇಶಕರ ಮಂಡಳಿ ತನ್ನ ಶೇರುದಾರರಿಗೆ ಪ್ರತಿ ಇಕ್ವಿಟಿ ಶೇರುಗಳ ಮೇಲೆ 1.10 ರೂಪಾಯಿ ಡಿವಿಡೆಂಡ್ ನೀಡಲಿದೆ. 

ವೆಬ್ದುನಿಯಾವನ್ನು ಓದಿ