2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಅಷ್ಟೇ ಪ್ರಮಾಣದ ದಂಡ

ಶುಕ್ರವಾರ, 2 ಜೂನ್ 2017 (18:56 IST)
ನವದೆಹಲಿ: 2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಅಷ್ಟೆ ಪ್ರಮಾಣದ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
 
ಅಲ್ಲದೇ ಎರಡು ಲಕ್ಷ ರುಪಾಯಿಗಿಂತ ಹೆಚ್ಚು ನಗದು ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ಇದ್ದರೆ ಆ ಕುರಿತು '[email protected]'. ಗೆ ಮೇಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ಜನತೆಯನ್ನು ಕೋರಿದೆ.
 
ಕಪ್ಪು ಹಣ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಏಪ್ರಿಲ್ 1, 2017ರಿಂದ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟನ್ನು ನಿಷೇಧಿಸಿದೆ. ಒಂದೇ ವಹಿವಾಟಿನಲ್ಲಿ ಅಥವಾ ಒಂದೇ ಸಂದರ್ಭ, ಈವೆಂಟ್ ಅಥವಾ ಓರ್ವ ವ್ಯಕ್ತಿಗೆ ಸಂಬಂಧಪಟ್ಟಂತೆ 2 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರವನ್ನು ಯಾರೂ ನಡೆಸುವಂತಿಲ್ಲ. ಒಂದು ವೇಳೆ ನಿಯಮ ತಪ್ಪಿದಲ್ಲಿ ಆದಾಯ ತೆರಿಗೆ ನೀತಿಯ ಸೆಕ್ಷನ್ 269ST ಅನ್ವಯ ಅಪರಾಧಿಗಳಿಗೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ