ಆದಾಯ ತೆರಿಗೆ ಹೊಸ ಕಾನೂನು- ಕಾರ್ಯಪಡೆ ರಚನೆ
ಆದಾಯ ತೆರಿಗೆ ಕಾನೂನು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆದಾಯ ತೆರಿಗೆಗೆ ಸಂಬಂಧಿಸಿದ ಹೊಸ ಕಾನೂನು ಹೇಗಿರಬೇಕು ಎಂದು ಪರಿಶೀಲನೆ ನಡೆಸಲು ಆರು ಮಂದಿ ಸದಸ್ಯರಿರುವ ಕಾರ್ಯ ಪಡೆ ರಚಿಸಿದೆ.
ಸೆಪ್ಟಂಬರ್‌ನಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು 50 ವರ್ಷಗಳ ಹಿಂದಿನ ಆದಾಯ ತೆರಿಗೆ ಕಾಯ್ದೆಯನ್ನು ಈಗಿನ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಮಾಡಲು ಪುನರ್ಚನೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ್ದರು.
ದೇಶದ ಅರ್ಥ ವ್ಯವಸ್ಥೆ ಬದಲಾವಣೆಗೊಂಡಿರುವ ಪರಿಣಾಮ ಹೊಸ ರೀತಿಯಲ್ಲಿ ಆದಾಯ ಹೊಂದುತ್ತಿರುವ ವರ್ಗದವರು ಸೃಷ್ಠಿಯಾಗಿದ್ದಾರೆ. ಇದಕ್ಕೆ ಪೂರಕವಾಗಿ ನರೇಂದ್ರ ಮೋದಿ ಅವರ ಹೇಳಿದಂತೆ ಹಣಕಾಸು ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ.