ಜಾಗತಿಕ ಭಯೋತ್ಪಾದನೆ ಹಾಗೂ ಅರ್ಥವ್ಯವಸ್ಥೆ ಬಗ್ಗೆ ಬ್ರಿಕ್ಸ್ ನಾಯಕತ್ವ ಪ್ರದರ್ಶಿಸುವ ಅಗತ್ಯವಿದೆ: ಪ್ರಧಾನಿ

ಶುಕ್ರವಾರ, 7 ಜುಲೈ 2017 (17:21 IST)
ಹ್ಯಾಂಬರ್ಗ್: ಜಾಗತಿಕ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಕಾರ್ಯಾಚರಣೆಗೆ ಎಲ್ಲರೂ ಒಗೂಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
 
ಜರ್ಮನಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಭಯೋತ್ಪಾದನೆ ನಿಗ್ರಹ ಹಾಗೂ ಜಾಗತಿಕ ಅರ್ಥವ್ಯವಸ್ಥೆ ಬಗ್ಗೆ ಬ್ರಿಕ್ಸ್ ನಾಯಕತ್ವವನ್ನು ಪ್ರದರ್ಶಿಸಬೇಕಿದೆ ಎಂದರು.
 
ಭಾರತದಲ್ಲಿ ಇತ್ತೀಚೆಗಷ್ಟೇ ಜಿಎಸ್ ಟಿ ಜಾರಿಯಾಗಿರುವುದರ ಬಗ್ಗೆಯೂ ಪ್ರಸ್ತಾಪಿಸಿರುವ ಮೋದಿ, ಭಾರತದಲ್ಲಿ ಜಾರಿಯಾಗಿರುವ ಜಿಎಸ್ ಯಿಂದ ಉದ್ಯಮಕ್ಕೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಚೀನಾದಲ್ಲಿ ನಡೆಯಲಿರುವ ಮುಂದಿನ ಬ್ರಿಕ್ಸ್ ಸಭೆಗೆ ಸಹಕಾರ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಶುಭಕೋರಿದ್ದಾರೆ.
 

ವೆಬ್ದುನಿಯಾವನ್ನು ಓದಿ