ನವದೆಹಲಿ :ತೈಲ ಕಂಪನಿಗಳು ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಮೇಲಿನ ಮೊತ್ತವನ್ನು ಮತ್ತೊಮ್ಮೆ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಸಬ್ಸಿಡಿ ಸಹಿತ ಸಿಲಿಂಡರ್‌ನ ಬೆಲೆಯನ್ನು ಏರಿಕೆ ಮಾಡದೇ ಆಗಸ್ಟ್ ತಿಂಗಳಲ್ಲಿದ್ದ 486.5 ರೂಪಾಯಿ ದರವನ್ನೇ ಮುಂದುವರಿಸಿದೆ. ಆದರೆ ಸಬ್ಸಿಡಿ ರಹಿತ ಸಿಲಿಂಡರ್‌ನ ದರದಲ್ಲಿ ಮಾತ್ರ ಏರಿಕೆಯಾಗಿದೆ.
ಗೃಹಬಳಕೆಯ ಸಬ್ಸಿಡಿ ರಹಿತ ಸಿಲಿಂಡರ್‌ನ ದರವನ್ನು 24.50 ರೂಪಾಯಿ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ನ ದರವನ್ನು 47 ರೂಪಾಯಿಗೆ ಏರಿಕೆಮಾಡಿದೆ. ಈ ಹೆಚ್ಚಳದಿಂದಾಗಿ ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್ 820.50 ರೂಪಾಯಿ ಆಗಿದ್ದರೆ, ವಾಣಿಜ್ಯ ಸಿಲೆಂಡರ್ ಬೆಲೆ 1,462 ರೂಪಾಯಿಗಳಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.