ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ನಕ್ಸಲ್ ಬೆಂಬಲಿಗರು ಅರೆಸ್ಟ್

ಬುಧವಾರ, 29 ಆಗಸ್ಟ್ 2018 (07:01 IST)
ನವದೆಹಲಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ನಕ್ಸಲ್ ಬೆಂಬಲಿಗರನ್ನು ಮಂಗಳವಾರ ಪೊಲೀಸರು  ಬಂಧಿಸಿರುವುದಾಗಿ ತಿಳಿದುಬಂದಿದೆ.


ಮೋದಿ ವಿರುದ್ಧ ಮಾವೋವಾದಿಗಳು ಸಂಚು ರೂಪಿಸಿದ್ದಾರೆಂಬ ಬಗ್ಗೆ ಪುಣೆ ಪೊಲೀಸರಿಗೆ ಜೂನ್​ನಲ್ಲೇ ಮಹತ್ವದ ಸುಳಿವು ದೊರೆತಿತ್ತು. ಈ ಪ್ರಕರಣದ ಸಂಬಂಧ ತನಿಖೆ ಮುಂದುವರಿಸಿದ ಪೊಲೀಸರು ಮಂಗಳವಾರ ಐದು ರಾಜ್ಯಗಳ 8 ನಕ್ಸಲ್ ಬೆಂಬಲಿಗರ ನಿವಾಸ ಮತ್ತು ಕಚೇರಿಗಳ ಮೇಲೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದಾರೆ. ಆ ವೇಳೆ, ಆಂಧ್ರದ ಮಾವೋವಾದಿ ಸಿದ್ಧಾಂತ ಬೆಂಬಲಿಗ ಹಾಗೂ ಬರಹಗಾರ ವರವರರಾವ್​ರನ್ನು ಪುಣೆಯ ಅವರ ಮಗಳ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಉಳಿದ 8 ಜನರ ಪೈಕಿ ಐವರನ್ನು ತಡರಾತ್ರಿ ಬಂಧಿಸಿದ್ದು, ಇತರರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ.


ಅಲ್ಲದೇ ಅಲ್ಲಿದ್ದ ಕೆಲವು ದಾಖಲೆಗಳು ಕೂಡ ಹಂಚಿಕೆಯಾಗಿದ್ದು, ಇವೆಲ್ಲವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ  ಲ್ಯಾಪ್​ಟಾಪ್, ಸ್ಮಾರ್ಟ್​ಫೋನ್ ಹಾಗೂ ಪುಸ್ತಕಗಳು ಸಿಕ್ಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ