ಸ್ವಿಸ್ ಬ್ಯಾಂಕ್‌ ಕಪ್ಪು ಹಣದ ಪಟ್ಟಿಯಿಂದ 75 ನೇ ಸ್ಥಾನಕ್ಕೆ ಕುಸಿದ ಭಾರತ

ಸೋಮವಾರ, 4 ಜುಲೈ 2016 (17:19 IST)
ತೆರಿಗೆ ಪಾವತಿ ವಂಚಿಸಿ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ನಲ್ಲಿಡುವ ಭಾರತೀಯರ ಸಂಖ್ಯೆ ಕುಸಿಯುತ್ತಿರುವ ಪರಿಣಾಮವಾಗಿ ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ 75 ನೆಯ ಸ್ಥಾನಕ್ಕೆ ತಳ್ಳಲ್ಪಟಿದೆ.
 
ತೆರಿಗೆ ವಂಚಿಸಿ ಕೋಟಿ ಗಟ್ಟಲೆ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿರುವ ರಾಷ್ಟ್ರಗಳ ಪೈಕಿ ಗ್ರೇಟ್ ಬ್ರಿಟನ್ ಮೊದಲ ಸ್ಥಾನದಲ್ಲಿದ್ದು, ಅಮೆರಿಕಾ ಎರಡನೆಯ ಸ್ಥಾನ ಮತ್ತು ವೆಸ್ಟ್ ಇಂಡೀಸ್, ಪ್ರಾನ್ಸ್ ರಾಷ್ಟ್ರಗಳು ನಂತರದ ಸ್ಥಾನದಲಿದ್ದು, ನೆರೆಯ ರಾಷ್ಟ್ರ ಪಾಕಿಸ್ತಾನ 69 ನೇ ಸ್ಥಾನ ಪಡೆದುಕೊಂಡಿದೆ. 
 
ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟಿರುವ ರಾಷ್ಟ್ರಗಳ ಪೈಕಿ 2004 ನೆಯ ಸಾಲಿನಲ್ಲಿ ಭಾರತ 37 ನೇ ಸ್ಥಾನದಲ್ಲಿದ್ದು, ಕಳೆದ ವರ್ಷದಲ್ಲಿ 61 ನೇ ಸ್ಥಾನಕ್ಕೆ ಕುಸಿದಿತ್ತು. 
 
ಸ್ವಿಸ್ ಬ್ಯಾಂಕ್ ನೀಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿಶ್ವದ ವಿವಿಧ ದೇಶದ ಜನರು ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿರುವ ಒಟ್ಟು ಹಣದ ಪ್ರಮಾಣ 1.42 ಟ್ರಿಲಿಯನ್ (98 ಲಕ್ಷ ಕೋಟಿ). ವಿಶ್ವದ ಒಟ್ಟು ಹಣದ ನಾಲ್ಕನೆಯ ಭಾಗದಷ್ಟು ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ್ದು, ಇದರಲ್ಲಿ ಗ್ರೇಟ್ ಬ್ರಿಟನ್ ಶೇ 14 ರಷ್ಟು ಪಾಲು ಹೊಂದಿದೆ ಎಂದು ತಿಳಿಸುತ್ತಿದೆ.
 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ