ಒಳ ಕರೆಯ ರಿಂಗಣಿಸುವ ಅವಧಿ 30 ಸೆಕೆಂಡುಗಳಿಗೆ ಸೀಮಿತಗೊಳಿಸಿದ ಭಾರತೀಯ ದೂರ ಸಂಪರ್ಕ ಇಲಾಖೆ

ಭಾನುವಾರ, 3 ನವೆಂಬರ್ 2019 (11:13 IST)
ನವದೆಹಲಿ : ಎಲ್ಲಾ ಟೆಲಿಕಾಂ ಕಂಪೆನಿಗಳು ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಗಳಿಗೆ ಬರುವ ಒಳ ಕರೆಯ ರಿಂಗಣಿಸುವ ಅವಧಿಯನ್ನು ಒಂದೇ ಅವಧಿಗೆ ಸೀಮಿತಗೊಳಿಸುವಂತೆ ಭಾರತೀಯ ದೂರ ಸಂಪರ್ಕ ಇಲಾಖೆ ತಿಳಿಸಿದೆ.



ರಿಲಾಯನ್ಸ್ ಜಿಯೋ ಕಂಪೆನಿ ತನ್ನ ಒಳ ಕರೆಯ ರಿಂಗಣಿಸುವ ಅವಧಿಯನ್ನು 25 ಸೆಕೆಂಡುಗಳಿಗೆ ಸೀಮಿತಗೊಳಿಸಿದರೆ, ಏರ್ ಟೆಲ್ ಕಂಪೆನಿ 45 ಸೆಕೆಂಡುಗಳಿಗೆ ಸೀಮಿತಗೊಳಿಸಿ ಬಳಿಕ 25 ಸೆಕೆಂಡುಗಳಿಗೆ ಇಳಿಸಿತ್ತು.

 

ಇದೀಗ ಭಾರತೀಯ ದೂರ ಸಂಪರ್ಕ ಇಲಾಖೆ ಟೆಲಿಕಾಂ ಕಂಪೆನಿಗಳ ಅಭಿಪ್ರಾಯದ ಮೇರೆಗೆ ಮೊಬೈಲ್ ಒಳ ಕರೆಯ ರಿಂಗಿಣಿಸುವ ಅವಧಿಯನ್ನು 30 ಸೆಕೆಂಡುಗಳಿಗೆ ಹಾಗೂ ಲ್ಯಾಂಡ್ ಲೈನ್ ಗಳಿಗೆ ಬರುವ ಒಳ ಕರೆಯ ರಿಂಗಣಿಸುವ ಅವಧಿಯನ್ನು 60 ಸೆಕೆಂಡುಗಳಿಗೆ ಸೀಮಿತಗೊಳಿಸುವಂತೆ ತಿಳಿಸಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ