ತನ್ನ ಬಳಕೆದಾರರ ಕೆಲಸ ಸುಲಭ ಮಾಡಿದೆ ಇನ್ಸ್ಟ್ರಾಗ್ರಾಮ್. ಹೇಗೆ ಗೊತ್ತಾ?

ಶನಿವಾರ, 6 ಅಕ್ಟೋಬರ್ 2018 (14:28 IST)
ಬೆಂಗಳೂರು : ಇನ್ಸ್ಟ್ರಾಗ್ರಾಮ್ ತನ್ನ ಬಳಕೆದಾರರಿಗೆ ತಮ್ಮ ಸ್ನೇಹಿತರನ್ನು ಹುಡುಕಲು ಸುಲಭವಾಗಲು ಹೊಸ ಫೀಚರ್ ನ್ನು ಶುರುಮಾಡಿದೆ.


Nametag ಹೆಸರಿನ ಈ ಫೀಚರ್ ಕಸ್ಟಮೈಸ್ ಗುರುತಿನ ಕಾರ್ಡ್ ಆಗಿದ್ದು, ಇದನ್ನು ಸ್ಕ್ಯಾನ್ ಮಾಡಿ ಇನ್ಸ್ಟ್ರಾಗ್ರಾಮ್ ಬಳಕೆದಾರರು ತಮ್ಮ  ಸ್ನೇಹಿತರನ್ನು ಸುಲಭವಾಗಿ ಸೇರಿಸಬಹುದಾಗಿದೆ. ಇದಲ್ಲದೆ ಯುಎಸ್ ನಲ್ಲಿ school communities ಹೆಸರಿನ ಫೀಚರ್ ನ್ನು ಶುರು ಮಾಡಿದೆಯಂತೆ. ಈ ಫೀಚರ್ ನಲ್ಲಿ ಸ್ಕೂಲಿನ ವಿದ್ಯಾರ್ಥಿಗಳು ಇನ್ಸ್ಟ್ರಾಗ್ರಾಮ್ ಮೂಲಕ ತಮ್ಮ ಸ್ಕೂಲಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಬಹುದಂತೆ.


ಮೊದಲು ಇನ್ಸ್ಟ್ರಾಗ್ರಾಮ್ ಅಕೌಂಟ್ ಗೆ ಹೋಗಿ. ಬಲಕ್ಕಿರುವ ಮೇಲ್ಭಾಗದ ಮೆನು ಬಟನ್ ಒತ್ತಿ. ಅಲ್ಲಿ Nametag ಫೀಚರ್ ಸೆಲೆಕ್ಟ್ ಮಾಡಿ. ಇದು ಫೇಸ್ಬುಕ್, ವಾಟ್ಸಾಪ್ ನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಕೂಡ ನಿಮ್ಮ ಸ್ನೇಹಿತರನ್ನು ಸರ್ಚ್ ಮಾಡಿ ಅವರ ಜೊತೆ ಚಾಟ್ ಮಾಡಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ