ಹಲ್ಲುಜ್ಜಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೀರಾ. ಹಾಗಾದ್ರೆ ನಿಮಗೆ ಈ ಅಪಾಯ ತಪ್ಪಿದ್ದಲ್ಲ

ಶನಿವಾರ, 6 ಅಕ್ಟೋಬರ್ 2018 (08:24 IST)
ಬೆಂಗಳೂರು : ಕೆಲವರಿಗೆ ಬೆಳಿಗ್ಗೆ ಎದ್ದಾಗ ಹಲ್ಲುಜ್ಜಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಅತಿ ಹೆಚ್ಚು ಸಮಯ ಹಲ್ಲುಜ್ಜುವುದು, ಹಾಗೂ ಕಾರ್ಬೊನೇಟ್ ಅಂಶಗಳನ್ನು ಹೊಂದಿರುವ ಪಾನೀಯಗಳ ಬಳಕೆಯನ್ನು ತ್ಯಜಿಸುವುದು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಹೆಚ್ಚು ಸಮಯ ಹಲ್ಲುಜ್ಜುವುದು ಸೂಕ್ತವಲ್ಲ. ಎಡಿಎ(ಅಮೆರಿಕನ್ ಡೆಂಟಲ್ ಅಸೋಸಿಯೇಷನ್) ಶಿಫಾರಸ್ಸಿನ ಪ್ರಕಾರ 2-3 ನಿಮಿಷಗಳ ಕಾಲ ಹಲ್ಲುಜ್ಜುವುದು ಸೂಕ್ತವಾಗಿದೆ. ಅತಿ ಹೆಚ್ಚು ಸಮಯ ಹಲ್ಲುಜ್ಜುವುದರಿಂದ ಸಂವೇದನೆ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.


ಚಳಿಗಾಲದಲ್ಲಿ ಹೆಚ್ಚು ಹಸಿವಾಗುವುದು ಸಹಜ, ಕಾರ್ಬೊನೇಟ್ ಅಂಶಗಳನ್ನು ಹೊಂದಿರುವ ಪಾನೀಯಗಳ ಬದಲಿಗೆ ಬಿಸಿ ಪಾನೀಯಗಳನ್ನು ಸೇವಿಸುವುದು ಉತ್ತಮ.


ಸೈಡರ್ ಅಥವಾ ಹೆಚ್ಚು ಮಸಾಲೆ ಇರುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸವಿದ್ದರೆ ಅವು ಹಲ್ಲುಗಳಿಗೆ ಹಾನಿ ಉಂಟುಮಾಡಬಲ್ಲದು, ಈಗಾಗಲೇ ಇವುಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ, ಬೆಚ್ಚಗಿನ ಉಪ್ಪು ನೀರಿನಲ್ಲಿ ಹಲ್ಲು ಮುಕ್ಕಳಿಸುವುದರಿಂದ ಹಲ್ಲಿಗೆ ಉಂಟಾದ ಹಾನಿ, ನೋವುಗಳನ್ನು ತಡೆಯಬಹುದಾಗಿದೆ.


ಚಳಿಗಾಲದಲ್ಲಿ ಸಕ್ಕರೆಯನ್ನು ಕಡಿಮೆ ಉಪಯೋಗಿಸುವುದು ಸಹ ಹಲ್ಲುಗಳ ರಕ್ಷಣೆಗೆ ಉತ್ತಮ ಕ್ರಮವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ