ನಿಮ್ಮ ಫೇಸ್‌ಬುಕ್ ಪ್ರೊಫೈಲ್‌‌ಗೆ ಯಾರೆಲ್ಲ ಭೇಟಿ ನೀಡಿದ್ದಾರೆ ತಿಳಿಯಬೇಕೆ?

ಶುಕ್ರವಾರ, 6 ಮೇ 2016 (19:05 IST)
ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ ಅಥವಾ ಇತ್ತೀಚಿನ ಪೋಟೋವನ್ನು ಸಾಮಾನ್ಯವಾಗಿ ಎಷ್ಟು ಜನ ವೀಕ್ಷಿಸಿದ್ದಾರೆ ಎಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇರುತ್ತದೆ.
ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಭೇಟಿ ನೀಡುವವರನ್ನು ತಿಳಿಯಲು ಈ ಕ್ರಮಗಳನ್ನು ಅನುಸರಿಸಿ
 
1. ನಿಮ್ಮ ಫೇಸ್‌ಬುಕ್ ಖಾತೆಯನ್ನು ಲಾಗ್‌ಇನ್ ಮಾಡಿ.
 
2. ಟೈಮ್‌ಲೈನ್‌ ಮೇಲೆ ರೈಟ್‌ ಕ್ಲಿಕ್ ಮಾಡಿ "ವೀವ್ ಪೇಜ್ ಸೌರ್ಸ್" ಆಯ್ಕೆಯನ್ನು ಆಯ್ದಕೊಳ್ಳಿ.
 
3. ಕೇವಲ ಸಂಕೇತಗಳೆ ತುಂಬಿದ ಪುಟ ತೆರೆದುಕೊಳ್ಳುತ್ತದೆ. ಗೊಂದಲ ಮಾಡಿಕೊಳ್ಳಬೇಡಿ, ಇದು ಮೊದಲ ಪ್ರತಿಕ್ರಿಯೆಯಾಗಿರುತ್ತದೆ.
 
4. ಕೀಬೋರ್ಡ್‌ನಲ್ಲಿ ಸಿಟಿಆರ್‌ಎಲ್+ಎಫ್ ಬಟನ್‌ ಒತ್ತಿ, ಮಾಹಿತಿಗಳನ್ನು ಹುಡುಕಲು ಆರಂಭಿಸುತ್ತದೆ.
 
5. ಬಲ ಬದಿಯಲ್ಲಿ ತೆರೆದುಕೊಳ್ಳುವ ಬಾಕ್ಸ್‌ನಲ್ಲಿ (InitialChatFriendsList) ಎಂದು ಟೈಪ್ ಮಾಡಿ.
 
6. "InitialChatFriendsList" ಮುಂದಿನ ಸಂಖ್ಯೆಗಳ ಪಟ್ಟಿಯನ್ನು ತೆರೆದುಕೊಳ್ಳುತ್ತದೆ.
 
7. ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಭೇಟಿ ನೀಡಿರುವವರ ಹೆಸರು ಮತ್ತು ಐಡಿ ತೆರೆದುಕೊಳ್ಳುತ್ತದೆ. 
 
8. ಪ್ರೊಫೈಲ್‌ಗೆ ಭೇಟಿ ನೀಡಿರುವವರ ಐಡಿಯನ್ನು ನಕಲು ಮಾಡಿಕೊಂಡು, ಫೇಸ್‌ಬುಕ್.ಕಾಮ್‌ಗೆ ಭೇಟಿ ನೀಡಿ \( ಸ್ಲ್ಯಾಶ್) ಜೊತೆಗೆ ಐಡಿಯನ್ನು ಪೇಸ್ಟ್ ಮಾಡಿ. ಉದಾ, ಫೇಸ್‌ಬುಕ್.ಕಾಮ್./100001825159730 ಎಂದು ಪೇಸ್ಟ್ ಮಾಡಿ.
 
9. ನೆನಪಿಡಿ, ಮೊದಲ ಐಡಿ ನಿಮ್ಮ ಫೇಸ್‌ಬುಕ್‌ಗೆ ಹೆಚ್ಚು ಭೇಟಿ ನೀಡಿರುವವರನ್ನು ತೋರಿಸದರೆ, ಕೊನೆಯ ಐಡಿ ಕಡಿಮೆ ಭೇಟಿ ನೀಡಿರುವವರನ್ನು ಸೂಚಿಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ