ಪರಿಸರ ಮಾಲಿನ್ಯ ಉಂಟು ಮಾಡದ ಕೆಟಿಎಂ ದ್ವಿಚಕ್ರ ವಾಹನಗಳನ್ನು ಬಜಾಜ್ ಆಟೋ ಬಿಡುಗಡೆ ಮಾಡಿದೆ. ಬಿಎಸ್ 4 ಮಾನದಂಡಗಳೊಂದಿಗೆ ಡ್ಯೂಕ್-390, 250, 200 ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಡ್ಯೂಕ್-390 ಬೆಲೆ ರೂ.2,25,730, ಡ್ಯೂಕ್-250 ಬೆಲೆ ರೂ.1,73,000, ಡ್ಯೂಕ್-200 ಬೆಲೆ ರೂ.1,40,000 (ಎಕ್ಸ್-ಶೋರೂಂ ಬೆಲೆ ದೆಹಲಿ).
ಕಲರ್ ಎಲ್‍ಇಡಿ ಪರದೆ, ಡಿಜಿಟಲ್ ಯುನಿಟ್, ಬ್ಲ್ಯಾಕ್ ವ್ಹೀಲ್ ಜತೆಗೆ ಆರೇಂಜ್ ಫ್ರಂಟ್ ಫ್ರೇಮ್, ಹ್ಯಾಲೋಜನ್ ಬಲ್ಬ್, ಕ್ಲಚ್ ಮತ್ತು ಬ್ರೇಕ್ ಲೀವರ್ ಅಡ್ಜೆಸ್ಟಬಲ್ ಸೌಲಭ್ಯಗಳನ್ನು ನೀಡಲಾಗಿದೆ.