ಲಾಭದಲ್ಲಿ ಮುನ್ನುಗ್ಗುತ್ತಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್

ಶುಕ್ರವಾರ, 20 ಜನವರಿ 2017 (13:27 IST)
ಪ್ರಸ್ತುತ ಆರ್ಥಿಕ ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ಕ್ಷೇತ್ರದ ಲಕ್ಷ್ಮಿ ವಿಲಾಸ್ ಬ್ಯಾಂಕ್ ರೂ.78.38 ಕೋಟಿ ನಿಖರ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಸಮಯದಲ್ಲಿ ರೂ.46.07 ಕೋಟಿಗೆ ಹೋಲಿಸಿದರೆ ಇದು ಶೇ.70.1ರಷ್ಟು ಅಧಿಕ. 
 
ಈ ತ್ರೈಮಾಸಿಕದಲ್ಲಿ ಬ್ಯಾಂಕಿಗೆ ರೂ.879.26 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಬಂದ ಆದಾಯ ರೂ.723.05 ಕೋಟಿಗೆ ಹೋಲಿಸಿದರೆ ಇದು ಶೇ.21.60ರಷ್ಟು ಅಧಿಕ ಲಾಭ. ಬಡ್ಡಿ ಆದಾಯ ಶೇ.11.52ರಷ್ಟು ಹೆಚ್ಚಾಗಿ ರೂ.729.04 ಕೋಟಿಯಷ್ಟಿದೆ. 
 
ಇನ್ನು ನಿರ್ವಹಣೆ ರಹಿತ ಆಸ್ತಿ (ಎನ್‍ಪಿಎ) ಸ್ಥೂಲ ಎನ್‌ಪಿಎ ಶೇ.2.78ರಷ್ಟು, ನಿಖರ ಎನ್‍ಪಿಎ ಶೇ.1.82ರಷ್ಟು ಹೆಚ್ಚಾಗಿದೆ. 2016-17 ಏಪ್ರಿಲ್-ಡಿಸೆಂಬರ್‌ನಲ್ಲಿ ಬ್ಯಾಂಕ್ ಲಾಭ ಶೇ.55.40ಯಷ್ಟು ವೃದ್ಧಿಯೊಂದಿಗೆ ರೂ.203.91 ಕೋಟಿಯಷ್ಟಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ