ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

Sampriya

ಸೋಮವಾರ, 19 ಮೇ 2025 (19:58 IST)
Photo Credit X
ಕೊಪ್ಪಳ: ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಹಾಗೂ ಬಿ.ಆರ್‌. ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವವರು. ನನ್ನ ಪಾಲಿಗೆ ಅವರೇ ಎರಡನೇ ಅಂಬೇಡ್ಕರ್‌ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್‌ ಆಂಜನೇಯ ಹೇಳಿದರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್‌ ಸದಸ್ಯ, ಸಚಿವ ಸೇರಿದಂತೆ ಯಾವ ಸ್ಥಾನಮಾನವೂ ಬೇಡ. ಸಿಎಂ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ಮಾಡಿದರೆ ಅದೇ ನನಗೆ ದೊಡ್ಡ ಸ್ಥಾನಮಾನ ನೀಡಿದ ಹಾಗೇ ಎಂದರು.

ಸಚಿವ ಸೇರಿದಂತೆ ಯಾವ ಸ್ಥಾನಮಾನವೂ ಬೇಡ. ಒಳಮೀಸಲಾತಿಗಾಗಿ ಮಾದಿಗ ಸಮುದಾಯದ ಸಾಕಷ್ಟು ಜನ ಪ್ರಾಣ ತೆತ್ತಿದ್ದಾರೆ. ಇದಕ್ಕಾಗಿಯೇ ನಾನು ಸಚಿವನಾಗಬೇಕಿತ್ತು. ಈಗ ಅದೇ ಸಿಕ್ಕರೆ ಉಳಿದ ಯಾವ ಸ್ಥಾನಮಾನಗಳೂ ನಗಣ್ಯ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ