ರಸ್ತೆಗಿಳಿಯಲಿದೆ ಆಂಡ್ರಾಯ್ಡ್ ’ಸ್ಮಾರ್ಟ್ ಬೈಕ್’

ಗುರುವಾರ, 5 ಜನವರಿ 2017 (10:10 IST)
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ಮಾಡುವ ಸ್ಮಾರ್ಟ್‍ಫೋನ್, ಸ್ಮಾರ್ಟ್ ವಾಚ್‍ಗಳ ಬಗ್ಗೆ ಗೊತ್ತೇ ಇದೆ. ಆಂಡ್ರಾಯ್ಡ್ ಆಪ್‌ಗಳೊಂದಿಗೆ ಕೆಲಸ ಮಾಡುವ ಸ್ಮಾರ್ಟ್ ಕಾರು, ಟಿವಿಗಳು ಸಹ ಬಂದಿವೆ. ಈಗ ಸ್ಮಾರ್ಟ್ ಬೈಕ್ ರಸ್ತೆಗಿಳಿಯಲು ರೆಡಿಯಾಗಿದೆ.
 
ಆಂಡ್ರಾಯ್ಡ್ ಸಾಧನದೊಂದಿಗೆ ಕೆಲಸ ಮಾಡುವ ಈ ಬೈಕನ್ನು ಚೀನಾ ಮೂಲದ ಲಿಎಕೊ ಕಂಪನಿ ತಯಾರಿಸಿದೆ. ಆಂಡ್ರಾಯ್ಡ್ ಬೈಕ್ ವರ್ಷನ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ಮಾಡುವ ಈ ಬೈಕ್ ಹಿಡಿಯಲ್ಲಿ ನಾಲ್ಕು ಇಂಚಿನ ಸ್ಮಾರ್ಟ್ ಸ್ಕ್ರೀನ್ ಇರುತ್ತದೆ.
 
ಯಾವ ಡೈರೆಕ್ಷನ್‌ನಲ್ಲಿ ಹೋಗಬೇಕು ಎಂದು ಆ ಪರದೆ ತೋರಿಸುತ್ತದೆ. ಎಲ್ಲೆಲ್ಲಿ ಸುತ್ತಿದ್ದೇವೆ ಎಂಬುದನ್ನು ದಾಖಲಿಸಿಕೊಳ್ಳುತ್ತದೆ. ಹತ್ತಿರದಲ್ಲಿ ಇನ್ನೊಂದು ಸ್ಮಾರ್ಟ್ ಬೈಕ್ ಬಂದರೆ ಅದಕ್ಕೆ ಸಿಗ್ನಲ್ ಕೊಡುತ್ತದೆ. ಆನ್‍ಲೈನ್, ಆಫ್‌ಲೈನ್‌ನಲ್ಲೂ ಹಾಡನ್ನು ಕೇಳಬಹುದು. 
 
ಬೈಕನ್ನು ಯಾರಾದರು ಕದಿಯಲು ಪ್ರಯತ್ನಿಸಿದರೆ ಯಜಮಾನನ ಫೋನಿಗೆ ಎಚ್ಚರಿಕೆ ಸಂದೇಶ ಕಳಿಸುತ್ತೆ. ಸೆನ್ಸಾರ್ ಮೂಲಕ ಕಳ್ಳನ ವಿವರಗಳನ್ನು ದಾಖಲಿಸುತ್ತದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಬೈಕ್ ಅಮೆರಿಕಾ ರಸ್ತೆಗಳಿಗೆ ಇಳಿಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ