ಬೆಂಗಳೂರು: ಗಣೇಶೋತ್ಸವ ನಿಮಿತ್ತ ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಪ್ರಕಟಣೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟದ ಅಂಗಡಿಗಳು, ಕಸಾಯಿಖಾನೆಗಳು ಮುಚ್ಚಿರಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಧಾರ್ಮಿಕ ಹಬ್ಬದ ಸಂದರ್ಭಗಳಲ್ಲಿ ಬಿಬಿಎಂಪಿ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸುತ್ತದೆ.
ಇನ್ನು ಗಣೇಶ ಹಬ್ಬದ ನಿಮಿತ್ತ ಹೂ-ಹಣ್ಣುಗಳ ಮಾರಾಟಕ್ಕೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಬೆಲೆಯೂ ಗಗನಕ್ಕೇರಿದೆ. ಹಾಗಿದ್ದರೂ ಅನಿವಾರ್ಯವಾಗಿ ಹಬ್ಬದ ಸಂದರ್ಭದಲ್ಲಿ ಜನ ಖರೀದಿಗೆ ಮುಗಿಬೀಳುತ್ತಿದ್ದಾರೆ. ಇನ್ನು ಸಿಹಿ ತಿನಿಸುಗಳ ಅಂಗಡಿಗಳಲ್ಲೂ ಜನ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಇನ್ನು ಪರಿಸರ ಸ್ನೇಹೀ ಗಣೇಶನನ್ನೇ ಬಳಸುವಂತೆ ಬಿಬಿಎಂಪಿ ಕರೆ ನೀಡಿದೆ. ಗಣೇಶ ವಿಸರ್ಜನೆಗೂ ಬೆಂಗಳೂರಿನ ಸಾಕಷ್ಟು ಕೆರೆಗಳ ಕಲ್ಯಾಣಿಗಳನ್ನು ಬಳಸಲು ಕರೆ ನೀಡಿದೆ. ಇದಲ್ಲದೆ ಸಂಚಾರೀ ಟ್ಯಾಂಕ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.