120 ಡಿಗ್ರಿ ವೈಡ್ ಆಂಗಲ್ ಲೆನ್ಸ್ ವೈಶಿಷ್ಟ್ಯದ ಎಲ್‌ಜಿ ಎಕ್ಸ್-ಕ್ಯಾಮ್ ಸ್ಮಾರ್ಟ್‌ಪೋನ್ ಬಿಡುಗಡೆ
ಸೋಮವಾರ, 29 ಆಗಸ್ಟ್ 2016 (10:17 IST)
ದಕ್ಷಿಣ ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್ ಸಂಘಟಿತ ಎಲ್‌ಜಿ ಸಂಸ್ಥೆ, ಭಾರತದ ಮಾರುಕಟ್ಟೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ವೈಶಿಷ್ಟ್ಯದ ಎಕ್ಸ್-ಕ್ಯಾಮ್ ಆವೃತ್ತಿಯ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಿದೆ.
ಈ ಹೊಸ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಸ್ಟ್ಯಾಂಡರ್ಡ್ ಲೆನ್ಸ್ ಹೊಂದಿರುವ 13 ಮೆಗಾ ಪಿಕ್ಸೆಲ್ಸ್ ಕ್ಯಾಮೆರಾ ಮತ್ತು ವೈಡ್ ಆಂಗಲ್ ವೈಶಿಷ್ಟ್ಯದ 5 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ.
ನಾವು ಗ್ರಾಹಕರಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ಗಳನ್ನು ಸಮಂಜಸವಾದ ಬೆಲೆಯಲ್ಲಿ ನೀಡುತ್ತಿದ್ದೇವೆ ಎಂದು ಎಲ್‌ಡಿ ಇಂಡಿಯಾ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿರುವ ಅಮಿತ್ ಗುಜರಾಲ್ ತಿಳಿಸಿದ್ದಾರೆ.
ಎಕ್ಸ್-ಕ್ಯಾಮ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 5.2 ಇಂಚ್ ಫುಲ್ ಎಚ್‌ಡಿ ಡಿಸ್‌ಪ್ಲೇ, 2 ಜಿಬಿ ರ್ಯಾಮ್ ಜೊತೆಗೆ 1.14ಜಿಎಚ್‌ಝಡ್ ಆಕ್ಟಾ ಕೋರ್ ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ಆಪರೇಟಿಂಗ್ ಸಿಸ್ಟಮ್ ವೈಶಿಷ್ಟ್ಯವನ್ನು ಹೊಂದಿದೆ.
ಈ ಸ್ಮಾರ್ಟ್‌ಪೋನ್‌ಗಳು 16 ಜಿಬಿ ಆಂತರಿಕ ಸ್ಟೋರೇಜ್ ಜೊತೆಗೆ 2,520ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ