ಪೌರ ಕಾರ್ಮಿಕರ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

Sampriya

ಸೋಮವಾರ, 12 ಮೇ 2025 (18:30 IST)
ಬೆಂಗಳೂರು: 12,692 ಪೌರಕಾರ್ಮಿಕರ ಸೇವೆ ಖಾಯಂ ಆಗಿದ್ದು, ಪ್ರತಿ ತಿಂಗಳು 39,000 ರೂ. ವೇತನ ಸಿಗಲಿದೆ. ನಿವೃತ್ತಿ ವೇಳೆ ₹10 ಲಕ್ಷ ಠೇವಣಿ ಹಾಗೂ ₹6 ಸಾವಿರಪಿಂಚಣಿ ಸೌಲಭ್ಯ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು  ಹೇಳಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸೂರ್ಯ ಉದಯಿಸುವ ಮೊದಲೇ ಎದ್ದು ನಗರದಾದ್ಯಂತ ಮೂಲೆ ಮೂಲೆಗಳಲ್ಲಿ ಓಡಾಡಿ, ಗುಡಿಸಿ, ಸ್ವಚ್ಛಗೊಳಿಸಿ, ಒಪ್ಪಓರಣಗೊಳಿಸುವ ಪೌರಕಾರ್ಮಿಕರ ಶ್ರಮ ಬೇರೆಲ್ಲ ಕಾರ್ಯಗಳಿಗಿಂತ ಅತ್ಯಂತ ಶ್ರೇಷ್ಠ. ಸ್ವಚ್ಛ, ಸುಂದರ ನಗರಕ್ಕಾಗಿ
ದುಡಿಯುವ ಇಂತಹ ಕೈಗಳಿಗೆ ಅಗತ್ಯ ವೇತನ, ಮೂಲಭೂತಸೌಕರ್ಯಗಳ ಕೊರತೆ ಇದುವರೆಗಿನ ನೋವಿನ ಸಂಗತಿಯಾಗಿತ್ತು.

ಪೌರಕಾರ್ಮಿಕರ ಕಷ್ಟಗಳನ್ನು ಮನಗಂಡ ನಮ್ಮ ಸರ್ಕಾರವು ದೇಶಕ್ಕೆ ಮಾದರಿಯಾಗುವ ನಿರ್ಣಯವನ್ನು ಕೈಗೊಂಡಿದೆ. ಗುತ್ತಿಗೆ ಆಧಾರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿದ್ದೇವೆ. ಮಾಸಿಕ ವೇತನವನ್ನು 39 ಸಾವಿರಕ್ಕೆ ಏರಿಸುವ ಮೂಲಕ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಘೋಷಿಸಿದ್ದೇವೆ. ಇದೀಗ ರಾಜ್ಯದ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ.

ಬೆಂಗಳೂರು ನಗರದ 12,692 ಪೌರಕಾರ್ಮಿಕರ ಸೇವೆ ಖಾಯಂ ಆಗಿದ್ದು, ಪ್ರತಿ ತಿಂಗಳು 39,000 ರೂ. ವೇತನ ಸಿಗಲಿದೆ. ನಿವೃತ್ತಿ ವೇಳೆ 10 ಲಕ್ಷ ರೂ. ಠೇವಣಿ ಹಾಗೂ 6 ಸಾವಿರ ರೂ. ಪಿಂಚಣಿ ಸೌಲಭ್ಯ ಸಿಗಲಿದೆ. ಜೊತೆಗೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʼಡಿʼ ದರ್ಜೆ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳೂ ಸಿಗಲಿವೆ.

ಈ ಪ್ರಮುಖ ನಿರ್ಧಾರದ ಫಲಾನುಭವಿಗಳಾದ ಪೌರಕಾರ್ಮಿಕರ ಮಾತನೊಮ್ಮೆ ಆಲಿಸಿ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ