ಮುಂಬೈಯಂತೆ, ಬೆಂಗಳೂರಿನಲ್ಲೂ ಲೋಕಲ್ ರೈಲು ಸಂಪರ್ಕ: ಗೋಯಲ್

ಶನಿವಾರ, 28 ಅಕ್ಟೋಬರ್ 2017 (13:25 IST)
ಮುಂಬೈಯಂತೆಯೇ, ಬೆಂಗಳೂರು ಶೀಘ್ರದಲ್ಲೇ ಉಪನಗರ ರೈಲ್ವೇ ನೆಟ್ವರ್ಕ್ ಆರಂಭಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
1996 ರಿಂದ ದೇಶದ ಐಟಿ ರಾಜಧಾನಿಗೆ ಉಪನಗರಗಳಲ್ಲಿ ರೈಲ್ವೆ  ಸೇವೆಯ ಅವಶ್ಯಕತೆಯಿದೆ ಎಂದು ಹಿರಿಯ ಬಿಜೆಪಿ ನಾಯಕ ಅನಂತ್ ಕುಮಾರ್, ನಾನು ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚೆಯೇ ಸಲಹೆ ನೀಡಿದ್ದರು ಎಂದು ತಿಳಿುಸಿದ್ದಾರೆ.
 
ಉಪನಗರ ರೈಲ್ವೆ ಸೇವೆಯ ಬಗ್ಗೆ ಪ್ರಾಥಮಿಕ ವರದಿಯನ್ನು ಸಲ್ಲಿಸುವಂತೆ ಹಿರಿಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವಿಮಾನ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಕೇಂದ್ರಗಳಿಗೆ ರೈಲ್ವೆ ಸೇವೆ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
 
ಸೌತ್ ವೆಸ್ಟರ್ನ್ ರೈಲ್ವೇಗೆ 30 ದಿನಗಳಲ್ಲಿ ಯೋಜನೆಯನ್ನು ರೂಪಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ