ಜುಕರ್‌ಬರ್ಗ್‌‌ರ ಈ ವರ್ಷ ಹೊಸ ನಿರ್ಧಾರ ಏನು ಗೊತ್ತಾ?

ಗುರುವಾರ, 5 ಜನವರಿ 2017 (10:14 IST)
ಫೇಸ್‌ಬುಕ್ ಸೃಷ್ಟಿಕರ್ತ ಜುಕರ್‌ಬರ್ಗ್ ಇತ್ತೀಚೆಗೆ ಹೊಸ ಸವಾಲು ಹಾಕಿದ್ದಾರೆ. ಯಾರಿಗೆ ಅಂತಿದ್ದೀರಾ? ಸ್ವತಃ ಅವರಿಗೇ ಹಾಕಿಕೊಂಡಿದ್ದಾರೆ. ಪ್ರತಿ ವರ್ಷ ಒಂದು ಹೊಸ ಸವಾಲನ್ನು ಇಟ್ಟುಕೊಂಡು ಕೆಲಸ ಮಾಡುವುದು ಅವರ ಶೈಲಿ.
 
2017 ಮುಗಿಯುವುದರೊಳಗೆ ಅಮೆರಿಕಾದ ಪ್ರತಿ ರಾಜ್ಯದಲ್ಲೂ ಕೆಲವು ವ್ಯಕ್ತಿಗಳನ್ನು ವೈಯಕ್ತಿಕವಾಗಿ ಭೇಟಿ ಆಗಬೇಕೆಂದು ನಿರ್ಧರಿಸಿದ್ದಾರೆ. ಕಳೆದ ವರ್ಷ ತನ್ನ ಮನೆಗೆ ಕೃತಿಕ ಬುದ್ಧಿಮತ್ತೆ ಅಳವಡಿಸುವುದು, ಮಾಂಡರಿನ್ ಭಾಷೆ ಕಲಿಯುವುದು, 25 ಪುಸ್ತಕಗಳನ್ನು ಓದುವುದು, 587 ಕಿ.ಮೀ ಓಡುವಂತ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
 
ಈ ವರ್ಷ ಹೊರಗಡೆ ಹೋಗಿ ಸಾಧ್ಯವಾದಷ್ಟು ಜನರನ್ನು ಬೆರೆಯಬೇಕೆಂದು ನಿರ್ಧರಿಸಿದ್ದಾರೆ. ಜನ ಹೇಗೆ ಜೀವನ ನಡೆಸುತ್ತಿದ್ದಾರೆ, ಹೇಗೆ ಕೆಲಸ ಮಾಡುತ್ತಿದ್ದಾರೆ, ಭವಿಷ್ಯದ ಬಗ್ಗೆ ಏನು ಕನಸು ಕಾಣುತ್ತಿದ್ದಾರೆ ತಿಳಿದುಕೊಳ್ಳಬೇಕಿದೆಯಂತೆ. 
 
ಈ ವರ್ಷ ಪ್ರತಿಯೊಬ್ಬರ ಮಾತಿಗೂ ಪ್ರಾಧಾನ್ಯತೆ ಕೊಡುವುದು ನನ್ನ ಕೆಲಸ. ಎಲ್ಲರ ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಆಲಿಸುತ್ತೇನೆ. ಫೇಸ್‍ಬುಕ್, ಚಾನ್ ಜುಕರ್‌ಬರ್ಗ್ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಲು ಇದರಿಂದ ಸಾಧ್ಯವಾಗಲಿದೆ ಎಂದಿದ್ದಾರೆ ಜುಕರ್ ಬರ್ಗ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ