ಮೈಕ್ರೋಮ್ಯಾಕ್ಸ್‌ನಿಂದ ಕ್ಯಾನ್‌ವಾಲ್ ಫೈರ್ 5 ಮಾಡೆಲ್ ಮಾರುಕಟ್ಟೆಗೆ

ಶುಕ್ರವಾರ, 24 ಜೂನ್ 2016 (16:59 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಮೈಕ್ರೋಮ್ಯಾಕ್ಸ್, ಫೈರ್ ಮ್ಯೂಸಿಕ್ ವೈಶಿಷ್ಟ್ಯದ ಕ್ಯಾನವಾಸ್ ಫೈರ್-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ಗಳು ಮೈಕ್ರೋಮ್ಯಾಕ್ಸ್ ಅಧಿಕೃತ ಮಳಿಗೆಗಳಲ್ಲಿ ಗ್ರಾಹಕರಿಗೆ 6,199 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ.
 
ಫೈರ್ ಮ್ಯೂಸಿಕ್ ವೈಶಿಷ್ಟ್ಯದ ಕ್ಯಾನವಾಸ್ ಫೈರ್-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 1.3ಜಿಎಚ್‌ಝಡ್ ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್, 1 ಜಿಬಿ ರ್ಯಾಮ್ ಜೊತೆಗೆ 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು 64 ಜಿಬಿಯವರೆಗೂ ಹೆಚ್ಚಿಸಬಹುದಾಗಿದೆ.
 
ಈ ಹೊಸ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 5.5 ಇಂಚ್ ಐಪಿಎಸ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 8 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
 
ಫೈರ್ ಮ್ಯೂಸಿಕ್ ವೈಶಿಷ್ಟ್ಯದ ಕ್ಯಾನವಾಸ್ ಫೈರ್-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಡ್ಯುಯಲ್ ಸಿಮ್ ವೈಶಿಷ್ಟ್ಯವನ್ನು ಹೊಂದಿದ್ದು, 2500 ಸಾಮರ್ಥ್ಯದ ಬ್ಯಾಟರಿ ಮತ್ತು ಆಂಡ್ರಾಯ್ಡ್ ಮಾರ್ಷ್ಮ್ಯಾಲೋ ವೈಶಿಷ್ಟ್ಯವನ್ನು ಹೊಂದಿದೆ.
 
ಭಾರತದಲ್ಲಿ ಇಂಟರ್‌ನೆಟ್ ಬಳಕೆಯ ಪ್ರಮಾಣ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಳಕೆದಾರರು ದೊಡ್ಡ ಸ್ಕ್ರೀನ್ ಗಾತ್ರದ ಪೋನ್‌ಗಳನ್ನು ಬಳಸುತ್ತಿದ್ದಾರೆ. ದೇಶದ 80 ಪ್ರತಿಶತ ಸ್ಮಾರ್ಟ್‌ಪೋನ್‌ ಬಳಕೆದಾರರು ಎರಡು ಮೂರು ದಿನಗಳಲ್ಲಿ ಒಮ್ಮೆಯಾದರು ತಮ್ಮ ಪೋನ್ ಮೂಲಕ ವೀಡಿಯೊಗಳನ್ನು ವಿಕ್ಷೀಸುತ್ತಾರೆ. 
 
ಇದರಲ್ಲಿ ಅರ್ಧದಷ್ಟು ಬಳಕೆದಾರರು ಪ್ರತಿನಿತ್ಯ ತಮ್ಮ ಪೋನ್‌ ಮೂಲಕ ವೀಡಿಯೊ ವೀಕ್ಷಿಸುತ್ತಾರೆ. ಮತ್ತು ಭಾರತೀಯ ಯುವ ಪೀಳಿಗೆ ಆಡಿಯೋ ಮತ್ತು ವೀಡಿಯೊ ಮನರಂಜನೆಗೆ ಮಾರು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯೂಸಿಕ್ ವೈಶಿಷ್ಟ್ಯದ ಪೋನ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಮೈಕ್ರೋಮ್ಯಾಕ್ಸ್ ಇನ್ಫರ್ಮ್ಯಾಟಿಕ್ಸ್ ಮುಖ್ಯ ಮಾರುಕಟ್ಟೆ ಅಧಿಕಾರಿ ಶುಭಜಿತ್ ಸೇನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ