ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ನಡೆದ ಸಮಾರಂಭದಲ್ಲಿ ಮೊಟೋರೋಲಾ ಸಂಸ್ಥೆ ಮೋಟೋ ಜಿ-4 ಪ್ಲಸ್ ಮತ್ತು ಮೋಟೋ ಜಿ-4 ಬಜೆಟ್ ಪೋನ್ಗಳನ್ನು ಅನಾವರಣಗೊಳಿಸಿತ್ತು. ಇದೇ ಸಮಾರಂಭದಲ್ಲಿ ಮೊಟೋರೋಲಾ ಸಂಸ್ಥೆ ಮೋಟೋ ಜಿ-4 ಪ್ಲಸ್ ಆವೃತ್ತಿಯ ಪೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೋಟೋ ಜಿ-4 ಪೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.
ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳ ವೈಶಿಷ್ಟ್ಯಗಳು
ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳು ಗೊರಿಲ್ಲಾ ಗ್ಲಾಸ್ 3 ಮತ್ತು 401ಪಿಪಿಐ ಸ್ಪೋರ್ಟ್ಸ್ ಪಿಕ್ಸೆಲ್ ಡೆನ್ಸಿಟಿ ಒಳಗೊಂಡಂತೆ 5.5 ಇಂಚ್ ಫುಲ್ ಎಚ್ಡಿ ಡಿಸ್ಪ್ಲೇ ಹೊಂದಿದ್ದು, 1.5ಜಿಎಚ್ಝಡ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 617 ಪ್ರೊಸೆಸರ್, ಆಯಡ್ರಿನೋ 405 ಜಿಪಿಯು ಚಾಲಿತ 3000ಎಮ್ಎಎಚ್ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
ಈ ಆವೃತ್ತಿಯ ಪೋನ್ಗಳು ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿದ್ದು, 4-ಜಿ ಮತ್ತು 3-ಜಿ ಸೌಲಭ್ಯ ಸೇರಿದಂತೆ ಆಟೋ ಎಚ್ಡಿಆರ್, ಪನೊರಾಮಾ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.