5ಜಿ ತರಂಗಾಂತರಕ್ಕಿಂತಲೂ 10 ಪಟ್ಟು ಹೆಚ್ಚು!

ಶನಿವಾರ, 11 ಫೆಬ್ರವರಿ 2017 (08:53 IST)
ಸದ್ಯಕ್ಕೆ 4ಜಿ ಇಂಟರ್ನೆಟ್ ಸ್ಪೀಡ್‌ಗೆ ಜನ ಆನಂದಿಸುತ್ತಿದ್ದಾರೆ. ಕೆಲವು ನಿಮಿಷಗಳಲ್ಲಿ ಒಂದು ಸಿನಿಮಾ ಡೌನ್‍ಲೋಡ್ ಮಾಡಿಕೊಳ್ಳುತ್ತಿದ್ದಾರೆ. 5ಜಿ ತರಂಗಾಂತರ ಬಂದರೆ ನಿಮಿಷಗಳು ಸೆಕೆಂಡ್‍ಗಳಿಗೆ ಇಳಿಯಲಿವೆ ಎನ್ನುತ್ತಿದ್ದಾರೆ ತಜ್ಞರು. ಇನ್ನು 5ಜಿಗಿಂತ 10 ಪಟ್ಟು ಅಧಿಕ ವೇಗದೊಂದಿಗೆ ಡೌನ್‍ಲೋಡಿಕೊಳ್ಳುವಂತಿದ್ದರೆ?
 
ಊಹೆಗೆ ನಿಲುಕುತ್ತಿಲ್ಲ ಅಲ್ಲವೆ? ಈ ರೀತಿಯ ಅತ್ಯದ್ಭುತ ತಂತ್ರಜ್ಞಾವನ್ನು ಜಪಾನ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಜಪಾನ್‌ನ ಹಿರೋಷಿಮಾ ಯೂನಿವರ್ಸಿಟಿ, ರಾಷ್ಟ್ರೀಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಂಸ್ಥೆ ಶಾಸ್ತ್ರಜ್ಞರು ಟೆರಾ ಹಡ್ಜ್ ಟ್ರಾನ್ಸ್‌ಮೀಟರನ್ನು ಅಭಿವೃದ್ಧಿ ಪಡಿಸಿದ್ದಾರೆ.
 
ಇದು ಸೆಕೆಂಡಿಗೆ 100 ಜಿಬಿಗಿಂತಲೂ ಅಧಿಕ ವೇಗವಾಗಿ ಡಿಜಿಟಲ್ ಡಾಟಾವನ್ನು ಬದಲಾಯಿಸಲಿದೆ. ಅದೂ ವೈರ್‌ಲೆಸ್ ನೆಟ್‌ವರ್ಕ್ ಮೂಲಕ. ಇತ್ತೀಚೆಗೆ ನಿರ್ವಹಿಸಿದ ಪರೀಕ್ಷೆಗಳಲ್ಲಿ 105 ಗಿಗಾ ಬಿಟ್ಸ್ (13.125 ಜಿಬಿ)/ ಸೆಕೆಂಡ್ ವೇಗವಾಗಿ ಡಾಟಾ ಟ್ರಾನ್ಸಫರ್ ಮಾಡಲಾಗಿದೆ. 
 
ಆ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಂದು ಸಿನಿಮಾ 1ಜಿಬಿ ಇದ್ದರೆ..ಸೆಕೆಂಡ್‍ನಲ್ಲಿ 13 ಸಿನಿಮಾಗಳನ್ನು ಡೌನ್‌ಲೋಡ್ ಆಗುತ್ತದೆ ಎಂಬಂತಾಯಿತು. 2015ರ ವೇಳೆಗೆ ಈ ನೆಟ್‍ವರ್ಕ್ ಲಭ್ಯವಾಗುವ ಸಾಧ್ಯತೆಗಳಿವೆ. ವಿಮಾನಗಳ ನೆಟ್‍ವರ್ಕ್, ಸರ್ವಗಳಿಂದ ಭಾರಿ ಮೊತ್ತದಲ್ಲಿ ಡಾಟಾವನ್ನು ಟ್ರಾನ್ಸ್‌ಫರ್ ಮಾಡಲು, ನೆಟ್‍ವರ್ಕ್ ವೇಗವನ್ನು ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ