ಬೆಳ್ತಂಗಡಿ: ಧರ್ಮಸ್ಥಳದ ಸುತ್ತಾ ಮುತ್ತಾ ಹಲವು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣ ಸಂಬಂಧ ದೂರುದಾರ ಗುರುತಿಸಿದ 13 ಪಾಯಿಂಟ್‌ಗಳಲ್ಲಿ ಈಗಾಗಲೆ 12ಪಾಯಿಂಟ್‌ಗಳ ಶೋಧ ಕಾರ್ಯ ಮುಗಿದಿದೆ.
ಇದೀಗ ಕೇವಲ 13ನೇ ಒಂದೇ ಪಾಯಿಂಟ್ ಅಷ್ಟೇ ಬಾಕಿಯಿದೆ. ಆದರೆ ಈ ಪಾಯಿಂಟ್ ಅನ್ನು ಇಂದು ಕೂಡಾ ಉತ್ಖನನ ಮಾಡಿಲ್ಲ.
ಅತ್ಯಧುನಿಕ ತಾಂತ್ರಿಕ ವಿಧಾನವಾದ ಜಿಪಿಆರ್ ಬಳಸಿ 13ನೇ ಪಾಯಿಂಟ್‌ನಲ್ಲಿ ಕಳೇಬರಹ ಪತ್ತೆ ಕಾರ್ಯ ನಡೆಯಲಿದೆ ಎನ್ನಲಾಗಿದೆ. ಈ ಮೆಷಿನ್ ಬಂದ್ಮೇಲೆಯೇ 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಆರಂಭವಾಗಲಿದೆ.
13ನೇ ಪಾಯಿಂಟ್ ಯಾಕೆ ಅಷ್ಟೊಂದು ವಿಶೇಷತೆ ಅಂದರೆ ದೂರುದಾರ ನೀಡಿರುವ ಹೇಳಿಕ ಪ್ರಕಾರ 13ನೇ ಪಾಯಿಂಟ್‌ನಲ್ಲೇ ಹೆಚ್ಚು ಶವಗಳನ್ನು ಹೂತಿರುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆ ಇದೀಗ ಎಲ್ಲರ ಚಿತ್ತ 13ನೇ ಪಾಯಿಂಟ್ ಕಡೆ ಇದೆ.