10,000 ಅಂಕಗಳ ಗಡಿ ದಾಟಿದ ನಿಫ್ಟಿ: ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಇತಿಹಾಸ ನಿರ್ಮಾಣ

ಮಂಗಳವಾರ, 25 ಜುಲೈ 2017 (13:52 IST)
ಮುಂಬೈ: ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಇದೇ ಮೊದಲಬಾರಿಗೆ ಆರಂಭಿಕ ವಹಿವಾಟಿನಲ್ಲೇ 10,000 ಅಂಗಳನ್ನು ದಾತುವ ಮೂಲಕ ಇತಿಹಾಸ ನಿರ್ಮಿಸಿದೆ.
 
ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 32,374.30 ಅಂಕಗಳ ಮಟ್ಟವನ್ನು ತಲುಪುವ ಮೂಲಕ ಹೊಸ ಎತ್ತರವನ್ನು ಏರಿದೆ. ಬೆಳಗಿನ ವಹಿವಾಟಿನಲ್ಲೇ ನಿಫ್ಟಿ ಸೂಚ್ಯಂಕ 44.90 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು ದಾಖಲೆಯ ಐತಿಹಾಸಿಕ 10,000 ಅಂಕಗಳ ಮಟ್ಟವನ್ನು ದಾಟಿ 10,011.30 ಅಂಕಗಳಲ್ಲಿ ಸ್ಥಿರವಾಯಿತು. 
 
ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕ್ ಗಳ ಆಕರ್ಷಕ ತ್ರೈಮಾಸಿಕ ವರದಿಗಳು ಮಾರುಕಟ್ಟೆಯ ಸಂವೇದಿ ಸೂಚಂಕಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ ಎಂಬುದು ಆರ್ಥಿಕ ತಜ್ನರ ಅಭಿಪ್ರಾಯವಾಗಿದೆ. ಇನ್ನು ಬೆಳಗಿನ ವಹಿವಾಟಿನಲ್ಲಿ ಐಡಿಯಾ ಸೆಲ್ಯುಲರ್‌, ಭಾರ್ತಿ ಇನ್‌ಫ್ರಾಟೆಲ್‌, ವೇದಾಂತ, ಹೀರೋ ಮೋಟೋ ಕಾರ್ಪ್‌, ಐಸಿಐಸಿಐ ಬ್ಯಾಂಕ್‌ ಟಾಪ್ ಗೇನರ್ ಗಳಾಗಿದ್ದರೆ, ಝೀ ಎಂಟರ್‌ಟೇನ್‌ಮೆಂಟ್‌, ಟಾಟಾ ಮೋಟರ್‌, ಎಚ್‌ಸಿಎಲ್‌ ಟೆಕ್‌, ಈಶರ್‌ ಮೋಟರ್‌, ಅಲ್‌ಟ್ರಾ ಟೆಕ್‌ ಸಿಮೆಂಟ್‌ ಟಾಪ್ ಲೂಸರ್ ಗಳಾಗಿವೆ.
 

ವೆಬ್ದುನಿಯಾವನ್ನು ಓದಿ