ಇನ್ನುಮುಂದೆ ಪೆಟ್ರೋಲ್, ಡಿಸೇಲ್ ಬೇಕಾದ್ರೆ ಪೆಟ್ರೋಲ್ ಬಂಕ್ ಗೆ ಹೋಗಬೇಕಾಗಿಲ್ಲ. ಯಾಕೆ ಗೊತ್ತಾ?

ಗುರುವಾರ, 20 ಜೂನ್ 2019 (08:01 IST)
ನವದೆಹಲಿ : ವಾಹನಗಳಲ್ಲಿ ಪೆಟ್ರೋಲ್, ಡಿಸೇಲ್ ಖಾಲಿಯಾದರೆ ಪೆಟ್ರೋಲ್ ಬಂಕ್ ಗೆ ಹೋಗಬೇಕಿತ್ತು. ಆದರೆ ಇನ್ನುಮುಂದೆ  ಪೆಟ್ರೋಲ್, ಡಿಸೇಲ್ ಪೆಟ್ರೋಲ್ ಬಂಕ್ ನಲ್ಲಿ ಮಾತ್ರವಲ್ಲ ವಸ್ತುಗಳನ್ನು ಖರೀದಿ ಮಾಡುವ ಚಿಲ್ಲರೆ ಅಂಗಡಿಗಳಲ್ಲೂ ದೊರೆಯಲಿದೆಯಂತೆ.




ಹೌದು. ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಈ ಮಹತ್ವದ ಯೋಜನೆ ಜಾರಿಗೆ ತರುವ ನಿರ್ಧಾರ ಮಾಡಿದೆಯಯಂತೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಸ್ತಾವನೆಯನ್ನು ಸಿದ್ಧಪಡಿಸಲಿದ್ದು, ತೈಲ ವ್ಯಾಪಾರಕ್ಕೆ ಸಂಬಂದಪಟ್ಟ ಈಗಿನ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಇರುವ  ನಿಯಮ ಬದಲಾವಣೆಯಾದರೆ ಚಿಲ್ಲರೆ ಮಳಿಗೆಗಳಲ್ಲೂ ಪೆಟ್ರೋಲ್-ಡಿಸೇಲ್ ಸಿಗಲಿದೆ ಎನ್ನಲಾಗಿದೆ.


ಬ್ರಿಟನ್ ದೇಶಗಳಲ್ಲಿ ಈಗಾಗಲೇ ಚಿಲ್ಲರೆ ಮಳಿಗೆಗಳಲ್ಲಿ ಪೆಟ್ರೋಲ್ ಸಿಸಿಗುತ್ತಿದ್ದು ಇದರಿಂದ  ಭಾರತಕ್ಕೆ ಪ್ರೇರಣೆಯಾಗಿದೆ. ಈ ನಿಯಮ ಜಾರಿಗೆ ಬಂದರೆ ಸಾಮಾನ್ಯ ಜನರು ಸುಲಭ ಇಂಧನ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಸೌದಿ ಅರೇಬಿಯಾದ ಪ್ರಸಿದ್ಧ ಕಂಪನಿಗಳು ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ