ಬೆಂಗಳೂರಲ್ಲಿ ಎಟಿಎಂಗಳು ಖಾಲಿ ಖಾಲಿ: ಜನತೆಯ ಪರದಾಟ

ಭಾನುವಾರ, 16 ಏಪ್ರಿಲ್ 2017 (11:11 IST)
ಬೆಂಗಳೂರಿನಲ್ಲಿ ಎಟಿಎಂಗಳು ಹಣವಿಲ್ಲದೇ ನೋ ಕ್ಯಾಶ್ ಬೋರ್ಡ್ ಹೊತ್ತುಕೊಂಡು ನಿಂತಿವೆ. ಜನತೆ ಹಣವಿರುವ ಎಟಿಎಂ ಹುಡುಕಾಟದಲ್ಲಿ ತೊಡಗಿದ್ದಾರೆ.
 
ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ ಶೇ.65 ರಷ್ಟು ಹಣವನ್ನು ಸರಬರಾಜು ಮಾಡುತ್ತಿರುವುದರಿಂದ ಎಟಿಎಂಗಳಲ್ಲಿ ಹಣದ ಮುಗ್ಗಟ್ಟು ಎದುರಾಗಿದೆ ಎನ್ನುವುದು ಬ್ಯಾಂಕ್ ಸಿಬ್ಬಂದಿಗಳ ಅಳಲು. ಗ್ರಾಹಕರು ಮಾತ್ರ ಎಟಿಎಂಗಳಿಗೆ ಪರದಾಡುವುದು ತಪ್ಪುತ್ತಿಲ್ಲ.
 
ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲೂ ಎಟಿಎಂಗಳಲ್ಲಿ ಹಣವಿಲ್ಲದಿರುವುದು ಕಂಡು ಬಂದಿದೆ. ಬಹುತೇಕ ಎಟಿಎಂಗಳಲ್ಲಿ ಔಟ್ ಆಫ್ ಸರ್ವಿಸ್ ಅಥವಾ ನೋಕ್ಯಾಶ್ ಬೋರ್ಡ್ ಲಗತ್ತಿಸಲಾಗಿದೆ. 
 
ಮುಂದಿನ ಕೆಲ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ ಎಂದು ಬ್ಯಾಂಕ್‌ ವ್ಯವಸ್ಥಾಪಕರು ತಿಳಿಸಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ