ರೂ.2470 ಕೋಟಿ ನೋಕಿಯಾ ಆಫರ್

ಶುಕ್ರವಾರ, 10 ಫೆಬ್ರವರಿ 2017 (16:08 IST)
ಮೊಬೈಲ್ ದಿಗ್ಗಜ ಕಂಪೆನಿ ನೋಕಿಯಾ ಹೊಸ ಸಂಸ್ಥೆಯನ್ನು ಖರೀದಿಸುವ ಕಡೆಗೆ ದೃಷ್ಟಿ ಹರಿಸಿದೆ. ನೆಟ್‌ವರ್ಕ್ ಸಾಮಗ್ರಿಗಳ ತಯಾಯಿ ಕಂಪೆನಿ ಕಾಂಪ್‌ಟೆಲ್ ಖರೀದಿಗೆ ರೂ.2470 ಕೋಟಿ ಡೀಲ್‌ಗೆ ಮುಂದಾಗಿದೆ. 
 
ಫಿನ್‍ಲ್ಯಾಂಡ್ ಮೂಲದ ಕಾಂಪ್‌ಟೆಲ್ ಖರೀದಿಸುವ ಮೂಲಕ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮತ್ತಷ್ಟು ವಿಸ್ತರಿಸಬೇಕೆಂದು ನೋಕಿಯಾ ಪ್ರಣಾಳಿಕೆ ರೂಪಿಸಿದೆ. ಕಾಂಪ್‌ಟೆಲ್ ಒಂದು ಷೇರಿಗೆ 3.04 ಯೂರೋ ನಗದು ಆಫರ್ ಮಾಡಿದೆ. ಇದು ಕಾಂಪ್‌ಟೆಲ್ ಕಳೆದ ಬೆಲೆಗಿಂತಲೂ ಶೇ.29ರಷ್ಟು ಅಧಿಕ. 
 
ಕಳೆದ ವರ್ಷ ನೋಕಿಯಾ ಕಂಪೆನಿ ಫ್ರಾಂಕ್-ಅಮೆರಿಕಾದ ಅಲ್ಕಾಟೆಲ್-ಲೂಸೆಂಟ್ ಕಂಪೆನಿಯನ್ನು 15.6 ದಶಲಕ್ಷ ಯೂರೋಗಳಿಗೆ ಖರೀದಿಸಿತ್ತು. ವಾರ್ಷಿಕ ವೆಚ್ಚ 1.2 ದಶಲಕ್ಷ ಯೂರೋಗಳಷ್ಟು  ಕಡಿಮೆ ಮಾಡಿಕೊಳ್ಳಲು ಸಾವಿರಾರು ಉದ್ಯೋಗಗಳನ್ನೂ ಕಡಿತಗೊಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ