ಇದೀಗ, ಫೇಸ್‌ಬುಕ್‌ನಲ್ಲಿ 45 ಭಾಷೆಗಳಲ್ಲಿ ಸಂದೇಶ ಪೋಸ್ಟ್ ಮಾಡಬಹುದು ನಿಮಗೆ ಗೊತ್ತಾ?

ಶನಿವಾರ, 2 ಜುಲೈ 2016 (19:52 IST)
ದೈತ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಹೊಸ ವೈಶಿಷ್ಟ್ಯದ ಸಾಫ್ಟ್‌ವೇರ್‌ನ್ನು ಶೀಘ್ರದಲ್ಲಿಯೇ ಅಳವಡಿಸಲಾಗುತ್ತಿದ್ದು, ಬಳಕೆದಾರರು ತಮ್ಮ ಸಂದೇಶವನ್ನು ಸುಮಾರು 45 ಭಾಷೆಗಳಲ್ಲಿ ಪೋಸ್ಟ್ ಮಾಡಬಹುದಾಗಿದೆ.  
 
ನೂತನ ಸಾಫ್ಟ್‌ವೇರ್ ಅಳವಡಿಕೆಯಿಂದಾಗಿ ವಿವಿಧ ಭಾಷೆಗಳಿಗೆ ಸ್ವಯಂಚಾಲಿತವಾಗಿ ಭಾಷಾಂತರಿಸುವ ಕ್ಷಮತೆ ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ. 
 
ಮಾರ್ಕ್ ಜ್ಯೂಕೆರ್‌ರ್ಬರ್ಗ್ ಸ್ವಾಮ್ಯದ ಫೇಸ್‌ಬುಕ್‌ನಿಂದಾಗಿ ಬಳಕೆದಾರರು ಜಾಗತಿಕ ಮಟ್ಟದ ಬಳಕೆದಾರರೊಂದಿಗೆ ಸುಲಭವಾಗಿ ವ್ಯವಹರಿಸಲು ಸುಲಭವಾಗಲಿದೆ ಎನ್ನಲಾಗಿದೆ. 
 
ಬಳಕೆದಾರರು ಪ್ರಕಟಿಸಿದ ಪೋಸ್ಟ್‌ಗಳನ್ನು, ಫೇಸ್‌ಬುಕ್ ಬಳಕೆದಾರರು ತಾವು ನೀಡಿರುವ ಭಾಷಾ ಪ್ರಾಧ್ಯನತೆಯಲ್ಲಿನ ಭಾಷೆಗಳಲ್ಲಿ ನೋಡಬಹುದಾಗಿದೆ  
 
ಬಳಕೆದಾರರು ಮಾಡಬೇಕಾದದ್ದು ಇಷ್ಟೆ. ಪುಲ್ ಡೌನ್‌ ಮೆನುವಿನ ಮೇಲ್ ಕ್ಲಿಕ್ ಮಾಡಿ, ಫ್ರೆಂಚ್‌ನಿಂದ ಫಿಲಿಪಿನೊ, ಲಿಥುವೇನಿಯನ್ ವರೆಗೂ 45 ವಿವಿಧ ಭಾಷೆಗಳನ್ನು ಸೇರಿಸಬಹುದು ಎಂದು ಟೆಕ್ ವೆಬ್‌ಸೈಟ್ ಸಿಎನ್ಇಟಿ ವರದಿ ಮಾಡಿದೆ.
 
ಈ ಹೊಸ ವೈಶಿಷ್ಟ್ಯದ ಸಾಫ್ಟ್‌ವೇರ್‌ನ್ನು ಈಗಾಗಲೇ 5000 ವ್ಯವಹಾರ ಮತ್ತು ಬ್ರ್ಯಾಂಡ್ ಸಂಬಂಧಿತ ಪೇಜ್‌ಗಳು ಬಳಸುತ್ತಿದ್ದು, ಶೀಘ್ರದಲ್ಲಿಯೇ ಸಾಮಾಜಿಕ ಜಾಲತಾಣಗಳಿಗೆ ವಿಸ್ತರಿಸಲು ಪ್ರಯೋಗಗಳು ನಡೆಯುತ್ತಿವೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ