ಸತತವಾಗಿ 14ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ

ಶನಿವಾರ, 20 ಜೂನ್ 2020 (10:02 IST)
ನವದೆಹಲಿ : ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್. ಸತತವಾಗಿ 14ನೇ ದಿನವೂ  ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ  ಏರಿಕೆಯಾಗಿದೆ.


ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ ಕೂಡ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 51ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 61ಪೈಸೆ ಹೆಚ್ಚಳವಾಗಿದೆ. ಅದರಂತೆ ಕೇವಲ 14ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 7.62ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 8.28ರೂ. ಹೆಚ್ಚಳವಾಗಿದೆ. ಈಗ ಪೆಟ್ರೋಲ್ ಲೀಟರ್ ಗೆ 78.31ರೂ. ಹಾಗೂ ಡೀಸೆಲ್  ಲೀಟರ್ ಒಂದಕ್ಕೆ 77.04ರೂ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ