ಸುದ್ದಿ ಮಾಧ್ಯಗಳ ಪ್ರಕಾರ, ನೌಕಾಸೇನೆಯ ಅಧಿಕಾರಿಗಳು ಆಗಸ್ಟ್ 26 ರಂದು, ಮುಂದಿನ ಪೀಳಿಗೆಯ ಮಹತ್ವದ ಯೋಜನೆಯ ಬಗ್ಗೆ ಸಂಸದೀಯ ಸಮಿತಿಗೆ ವಿವರಣೆ ನೀಡಿದ್ದು, ಸಬ್‌ಮರೀನ್‌ಗಳ ಖರೀದಿಗೆ 4 ರಿಂದ 5 ಬಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನ ನೌಕಾಪಡೆ ಕರಾಚಿ ಶಿಪ್ ಯಾರ್ಡ್ ಮತ್ತು ಎಂಜಿನಿಯರಿಂಗ್ ವರ್ಕ್ಸ್‌ನ ಹಿರಿಯ ಅಧಿಕಾರಿಯೊಬ್ಬರು, ಕಂಪೆನಿಗೆ ಎಂಟು ಸಬ್‌ಮರೀನ್‌ಗಳಲ್ಲಿ ನಾಲ್ಕು ಸಬ್‌ಮರೀನ್‌ಗಳನ್ನು ಸಿದ್ದಪಡಿಸುವ ಗುತ್ತಿಗೆ ದೊರೆತಿದ್ದು, ಸಬ್‌ಮರೀನ್‌ಗಳಲ್ಲಿ ಎಐಪಿ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲಾ ಸಮಯದಲ್ಲಿ ಪಾಕಿಸ್ತಾನ ನಮ್ಮ ಸ್ನೇಹಿತ ಎಂದು ಹೇಳಿಕೊಳ್ಳುವ ಚೀನಾ, ಯೋಜನೆಯ ವೆಚ್ಚವನ್ನು ಭರಿಸುವ ಸಹಾಯಕ್ಕೆ ಇಳಿದಿದ್ದು, ಕಡಿಮೆ ಬಡ್ಡಿ ದರದಲ್ಲಿ ದೀರ್ಘಾವಧಿಯ ಸಾಲವನ್ನು ವಿಸ್ತರಿಸುವ ಸಾಧ್ಯತೆ ಇದೆ ವರದಿಯಾಗಿದೆ.