ಪ್ಯಾನ್ 2.0 ಬಂದ ಮೇಲೆ ಹಳೇ ಪ್ಯಾನ್ ಕಾರ್ಡ್ ಬದಲಾಯಿಸಬೇಕಾ, ಇಲ್ಲಿದೆ ವಿವರ

Krishnaveni K

ಶುಕ್ರವಾರ, 29 ನವೆಂಬರ್ 2024 (08:55 IST)
Photo Credit: X
ನವದೆಹಲಿ: ಕೇಂದ್ರ ಸರ್ಕಾರ ಈಗ ಕ್ಯೂ ಆರ್ ಕೋಡ್ ಒಳಗೊಂಡ ಹೊಸ ಪ್ಯಾನ್ ಕಾರ್ಡ್ ಜಾರಿಗೆ ತರಲು ಹೊರಟಿದೆ. ಪ್ಯಾನ್ 2.0 ಬಂದ ಮೇಲೆ ನಿಮ್ಮ ಬಳಿ ಈಗಾಗಲೇ ಇರುವ ಹಳೆಯ ಪ್ಯಾನ್ ಕಾರ್ಡ್ ನ್ನು ಬದಲಾಯಿಸಬೇಕೇ? ಇಲ್ಲಿದೆ ಮಾಹಿತಿ.

ಪ್ಯಾನ್ 2.0 ರಲ್ಲಿ ಕ್ಯೂ ಆರ್ ಕೋಡ್ ಸಹಿತ ಆಧುನಿಕ ತಂತ್ರಜ್ಞಾನವಿದೆ. ಗ್ರಾಹಕರ ಅನುಕೂಲಕ್ಕಾಗಿ ಇದನ್ನು ಈಮೇಲ್ ಮೂಲಕವೂ ಪಡೆದುಕೊಳ್ಳುವಂತೆ ಸರ್ಕಾರ ಅನುಕೂಲ ಕಲ್ಪಿಸಿದೆ. ಇ-ಆಡಳಿತ ವ್ಯವಸ್ಥೆಯ ಭಾಗವಾಗಿ ಕೇಂದ್ರ ಸರ್ಕಾರ ಪ್ಯಾನ್ 2.0 ಅನ್ನು ನವಂಬರ್ 25 ರಂದು ಜಾರಿಗೆ ತಂದಿದೆ. ಆದರೆ ಹೊಸ ಮಾದರಿಯ ಪ್ಯಾನ್ ಕಾರ್ಡ್ ಬಗ್ಗೆ ಕೇಳಿದಾಗಿನಿಂದ ನಮ್ಮ ಬಳಿ ಈಗ ಇರುವ ಪ್ಯಾನ್ ಕಾರ್ಡ್ ಬದಲಾಯಿಸಬೇಕೇ ಎಂಬ ಅನುಮಾನ ಅನೇಕರಿಗೆ ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಹೊಸ ಪ್ಯಾನ್ ಕಾರ್ಡ್ ಗಾಗಿ ಈಗ ಇರುವ ಪ್ಯಾನ್ ಕಾರ್ಡ್ ನ್ನು ಬದಲಾಯಿಸಬೇಕೆಂದೇನೂ ಇಲ್ಲ. ಹೊಸ ಪ್ಯಾನ್ ಕಾರ್ಡ್ ಬಂದಿದೆ ಎಂಬ ಕಾರಣಕ್ಕೆ ಹಳೆಯ ಪ್ಯಾನ್ ಕಾರ್ಡ್ ವ್ಯಾಲಿಡಿಟಿ ಕಳೆದುಕೊಳ್ಳುವುದಿಲ್ಲ. ಹೀಗಾಗಿ ತೆರಿಗೆ ಪಾವತಿದಾರರು ಸೇರಿದಂತೆ ಸಾಮಾನ್ಯ ಜನ ಈ ಬಗ್ಗೆ ಗೊಂದಲಕ್ಕೆ ಒಳಗಾಗಬೇಕಿಲ್ಲ.

ಹೊಸ ಪ್ಯಾನ್ ಕಾರ್ಡ್ ಎಲ್ಲಾ ಸರ್ಕಾರೀ ಏಜೆನ್ಸಿಗಳ ಕಾರ್ಯನಿರ್ವಹಣೆಗೆ ಕಾಮನ್ ಐಡೆಂಟಿಟಿಯಾಗಿ ಬಳಕೆಯಾಗಲಿದೆ. ಹೊಸ ಪ್ಯಾನ್ ಕಾರ್ಡ್ ನಿಂದ ನಿಮ್ಮ ಕಾರ್ಯನಿರ್ವಹಣೆ ಮತ್ತಷ್ಟು ಸುಲಭವಾಗಲಿದೆ.  ಇದು ಪರಿಸರ ಸ್ನೇಹಿ ವ್ಯವಸ್ಥೆಯಾಗಿದ್ದು ವೆಚ್ಚದ ಹೊರೆಯೂ ಕಡಿಮೆಯಾಗಲಿದೆ. ಇದರಲ್ಲಿ ಸುರಕ್ಷತೆ ಕೂಡಾ ಹೆಚ್ಚು. ಹಾಗಂತ ಹಳೆಯ ಪ್ಯಾನ್ ಕಾರ್ಡ್ ದಾರರು ಯಾವುದೇ ಆತಂಕಪಡಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ