Shani Dasha Horoscope 2025: ಶನಿ ದೆಶೆಯಿಂದ ಹೈರಾಣಾಗಿರುವ ಕುಂಭ ರಾಶಿಯವರಿಗೆ 2025 ರಲ್ಲಿ ಮುಕ್ತಿ

Krishnaveni K

ಶುಕ್ರವಾರ, 29 ನವೆಂಬರ್ 2024 (08:46 IST)
ಬೆಂಗಳೂರು: ಶನಿ ದೆಶೆಯ ಋಣಾತ್ಮಕ ಪರಿಣಾಮಗಳಿಂದ ಹೈರಾಣಾಗಿರುವವರಿಗೆ 2025 ರಲ್ಲಿ ಶುಭ ಸುದ್ದಿಯಿದ್ದು, ಈ ವರ್ಷ ನಿಮಗೆ ಶನಿಯಿಂದ ಮುಕ್ತಿ ಸಿಗುವುದು. ಉಳಿದಂತೆ ಇಲ್ಲಿದೆ ವಿವರ.

ಶನಿಯು 2025 ರಲ್ಲಿ ಕುಂಭ ರಾಶಿಯಿಂದ ಮುಕ್ತಿಯಾಗಿ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಮಾರ್ಚ್ 29 ರಂದು ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಕುಂಭ ರಾಶಿಯವರಿಗೆ ಶನಿಯಿಂದ ಮುಕ್ತಿ.

ಶನಿ ದೆಶೆಯ ಪರಿಣಾಮದಿಂದ 2024 ರಲ್ಲಿ ಕುಂಭ ರಾಶಿಯವರು ಸಾಕಷ್ಟು ಏಳು-ಬೀಳುಗಳನ್ನು ಕಂಡಿರುತ್ತಾರೆ. ಹಣಕಾಸಿನ ವಿಚಾರದಲ್ಲಿ ನಷ್ಟ, ದೈಹಿಕ ನೋವುಗಳು, ಉದ್ಯೋಗದಲ್ಲಿ ಸಮಸ್ಯೆಗಳು, ಕೆಲಸ ಕಾರ್ಯಗಳಲ್ಲಿ ಸೋಲು ಇತ್ಯಾದಿಗಳಿಂದ ಕಂಗೆಟ್ಟಿರುತ್ತೀರಿ.

ಆದರೆ ಈ ವರ್ಷ ಇದಕ್ಕೆಲ್ಲಾ ಮುಕ್ತಿ ಸಿಗಲಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿದ್ದು, ಉದ್ಯೋಗದಲ್ಲೂ ಉನ್ನತಿಗೇರುವ ಅವಕಾಶಗಳಿವೆ.  ವ್ಯವಹಾರಗಳಲ್ಲಿ ತೊಡಗಿಸಿಕೊಂಡವರಿಗೆ ಹಣ ಗಳಿಕೆಗೆ ನಾನಾ ಮಾರ್ಗಗಳು ಸಿಗಲಿದೆ. ಕೌಟುಂಬಿಕ ಸಮಸ್ಯೆಗಳೂ ನಿವಾರಣೆಯಾಗಿ ಉತ್ತಮ ಆರೋಗ್ಯ ಪಡೆಯಲಿದ್ದೀರಿ. ಹೀಗಾಗಿ ಈ ವರ್ಷ ನಿಮಗೆ ನೆಮ್ಮದಿಯ ವರ್ಷವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ