ಜೆಎಸ್ ಟಿ ಹೊಡೆತಕ್ಕೆ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಪಾರ್ಲೆ ಕಂಪೆನಿ
ಗುರುವಾರ, 22 ಆಗಸ್ಟ್ 2019 (09:03 IST)
ನವದೆಹಲಿ : ಜೆಎಸ್ ಟಿ ಹೊಡೆತಕ್ಕೆ ಪ್ರಖ್ಯಾತ ಬಿಸ್ಕೆಟ್ ಕಂಪೆನಿ ಪಾರ್ಲೆ ಪ್ರಾಡಕ್ಟ್ಸ್ ಲಿಮಿಟೆಡ್ ತನ್ನ 10,000 ಉದ್ಯೋಗಿಗಳನ್ನುವಜಾಗೊಳಿಸಲು ನಿರ್ಧಾರ ಮಾಡಿದೆ ಎನ್ನಲಾಗಿದೆ.
ಪಾರ್ಲೆ ಬಿಸ್ಕತ್ತು ಮಾರಾಟದಲ್ಲೂ ಗಣನೀಯ ಕುಸಿತವಾಗಿದ್ದು, ಉತ್ಪಾದನೆ ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ. ಪರಿಣಾಮವಾಗಿ 8 ಸಾವಿರದಿಂದ 10 ಸಾವಿರ ಉದ್ಯೋಗಿಗಳನ್ನು ಕೈಬಿಡಬೇಕಾಗಬಹುದು ಎಂದು ಕಂಪನಿಯ ಉತ್ಪಾದನೆ ಮತ್ತು ಮಾರಾಟ ವಿಭಾಗದ ಮುಖ್ಯಸ್ಥ ಮಯಂಕ್ ಶಾ ತಿಳಿಸಿದ್ದಾರೆ.
2017ರಲ್ಲಿ ದೇಶದಲ್ಲಿ ಜಿಎಸ್ ಟಿ ಜಾರಿಗೆ ಬಂದ ಬಳಿಕ ಪಾರ್ಲೆಜಿ ಕಂಪನಿಗೆ ಗ್ರಾಮೀಣ ಭಾಗದಲ್ಲಿ ತೀರ ನಷ್ಟವಾಗುತ್ತಿದೆ ಎನ್ನಲಾಗಿದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಕಂಪನಿಗೆ ತೀವ್ರ ಹೊಡೆತ ಬಿದ್ದಿದ್ದು, ಈ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಪಾರ್ಲೆ ತನ್ನ ಕಂಪನಿಯಿಂದ 10,000 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ ಎನ್ನಲಾಗಿದೆ.