ಆನ್ ಲೈನ್ ಆಹಾರ ಸೇವಾ ಸಂಸ್ಥೆಗಳ ವಿರುದ್ಧ ಸಿಡಿದೆದ್ದ ಹೊಟೇಲ್ ಮಾಲೀಕರು

ಮಂಗಳವಾರ, 20 ಆಗಸ್ಟ್ 2019 (08:52 IST)
ನವದೆಹಲಿ : ಆನ್ ಲೈನ್ ಆಹಾರ ಸೇವಾ ಸಂಸ್ಥೆಗಳ ವಿರುದ್ಧ  ದೇಶಾದ್ಯಂತ ಸಾವಿರಾರು ಹೊಟೇಲ್ ಮಾಲೀಕರು ಈಗ ಲಾಗ್ ಔಟ್ ಜೊಮ್ಯಾಟೋ ಆಂದೋಲನ ಆರಂಭಿಸಿದ್ದಾರೆ.
ಜೊಮ್ಯಾಟೋ, ಸ್ವಿಗ್ಗಿಯಂತಹ ಆಹಾರ ಡೆಲಿವರಿ ಸಂಸ್ಥೆಗಳು ಬಾರೀ ಜನಪ್ರಿಯತೆ ಗಳಿಸಿದ್ದು, ಇದರಿಂದ ಜನರು ಹೋಟೆಲ್ ಗಳ ಕಡೆಗೆ ಮುಖ ಮಾಡದೇ ಆನ್ ಲೈನ್ ನಲ್ಲೇ ಪುಡ್ ಆರ್ಡರ್ ಮಾಡಿ ಮನೆಯಲ್ಲಿಯೇ ಕುಳಿತು ತಿನ್ನುತ್ತಿದ್ದಾರೆ. ಅಲ್ಲದೇ ಹಲವಾರು ಡಿಸ್ಕೌಂಟ್, ಕೂಪನ್ ಗಳು ಸ್ಕ್ರಾಚ್ ಕಾರ್ಡ್ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡುತ್ತಿವೆ.


ಇದರಿಂದ ಹೊಟೇಲ್ ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದ್ದು ನಷ್ಟ ಅನುಭವಿಸುತ್ತಿವೆ. ಇದರಿಂದ ಹೋಟೆಲ್ ಮಾಲೀಕರಿಗೆ ಸಮಸ್ಯೆಯಾಗಿದ್ದು, ಬೆಂಗಳೂರು, ದೆಹಲಿ, ಮುಂಬೈ, ಗೋವಾ ಸೇರಿದಂತೆ ಹಲವು ನಗರಗಳಲ್ಲಿನ ಹೊಟೇಲ್ ಮಾಲೀಕರು ಲಾಗ್ ಔಟ್ ಅಭಿಯಾನ ಕೈಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ